
Former Minister Kumar Bangarappa's exclusive statement to Ashwavega News
ಸೋಮಣ್ಣ ಅವರು ಸೀನಿಯರ್ ಲೀಡರ್. ಅವರಿಗೆ ನಾವು ಕರೆದಿಲ್ಲ. ಅವರ ದೊಡ್ಡತನದಿಂದ ಅವರು ಬಂದರು. ದಾವಣಗೆರೆ ವಿಚಾರವಾಗಿ ಅವರು ಭೇಟಿ ನೀಡಿದರು. ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತದೋ, ಇಲ್ಲವೋ ಗೊತ್ತಿಲ್ಲ. ನಮ್ಮ ಭಾವನೆ, ಅನಿಸಿಕೆಗಳನ್ನು ನಾವು ತಿಳಿಸಿದ್ದೇವೆ ಎಂದು ಬೆಂಗಳೂರಿನಲ್ಲಿ ಅಶ್ವವೇಗ ನ್ಯೂಸ್ ಗೆ ಹೇಳಿಕೆ ನೀಡಿದ್ದಾರೆ.
ಒಂದು ಚರ್ಚೆ ವಾದವನ ಮಾಡುತ್ತಿದ್ದೇವೆ. ವಾಕ್ಕ್ ವಿಚಾರಕ್ಕೆ ಕೇಂದ್ರ ಸರ್ಕಾರ ನಮ್ಮಿಗೆ ಮನಣ್ಣೆ ಕೊಟ್ಟಿದೆ. ಆರ್ಗನೈಜೆಷನ್ ಬಗ್ಗೆ ನಾವು ಹೇಳಿದ್ದೇವೆ. ನಿರ್ಣಯ ತೆಗೆದುಕೊಳ್ಳುವುದು ವರಿಷ್ಠರ ವಿಷಯ. ಉಚ್ಚಾಟಿತ ಶಾಸಕರ ಬಗ್ಗೆ ನಾನು ಮಾತನಾಡಲು ಹೋಗಲ್ಲ. ಕೇಂದ್ರ ಸರ್ಕಾರ ನಿರ್ಣಯ ಮಾಡುತ್ತದೆ ಶಿಸ್ತು ಸಮಿತಿ. ನಾವು ಅವರನ್ನು ವಾಪಸ್ ತರ್ತೀವಿ ಅಂತ ನಾನು ಹೇಳಲು ಆಗಲ್ಲ. ವರಿಷ್ಠರ ನಡೆಯಂತೆ ನಾವು ನಡೆಯುತ್ತಿದ್ದೇವೆ. ಯಡಿಯೂರಪ್ಪ ಅವರು ಸೀನಿಯರ್ ಲೀಡರ್.
ರಾಜ್ಯದಲ್ಲಿ ಬಿಜೆಪಿ ಕಟ್ಟಲು ಅವರು ಅಗತ್ಯ ಇದೆ. ಯಡಿಯೂರಪ್ಪ ಬಿಜೆಪಿಯ ಕಚೇರಿಗೆ ಬರಲು ಅವರಿಗೆ ಯಾವುದೇ ಅನುಮತಿ ಬೇಕಾಗಿಲ್ಲ. ಇನ್ನು ಮಗನಿಗೆ ಉಳ್ಳಿಸೋಕೆ ಕಚೇರಿಗೆ ಬರ್ತೀನಿ ಅಂದರೆ ಅದು ತಪ್ಪು. ಪಕ್ಷ ಕಟ್ಟಲು, ಸರಿ ಮಾಡುವ ಉದ್ದೇಶದಿಂದ ಬಂದ್ರೆ ಅದು ಸರಿ. ಪಕ್ಷದ ಆದೇಶದಂತೆ ನಾವು ಯಾವಾಗಲೂ ಪಾಲನೆ ಮಾಡುತ್ತಿದ್ದೇವೆ. ರಾಜ್ಯ ಬಿಜೆಪಿಯ ಗೊಂದಲವನ್ನು ಹೈಕಮಾಂಡ್ ಬಹುಶಃ ಶೀಘ್ರದಲ್ಲೇ ಸರಿ ಮಾಡಬಹುದು ಎಂದು ತಿಳಿಸಿದ್ದಾರೆ.