my voice in aishwarya gowda cheating case dk suresh
ಐಶ್ವರ್ಯ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಮುಲ್ ಅಧ್ಯಕ್ಷ ಡಿಕೆ ಸುರೇಶ್, ಯಾರೋ ಒಬ್ಬ ಧ್ವನಿಯನ್ನು ಮಿಮಿಕ್ರಿ ಮಾಡುವ ಕಲಾವಿದ ತನ್ನ ವಾಯ್ಸ್ ಅನುಕರಣೆ ಮಾಡಿ ಮಾತಾಡಿರವುದು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿರುವುದನ್ನು ತಾನು ನೋಡಿದ್ದೇನೆಂದು ಹೇಳಿದರು.
ಈ ಬಗ್ಗೆ ಹಲವು ದೂರುಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ, ತನಿಖೆ ಯಾವ ಹಂತದಲ್ಲಿದೆ ಅಂತ ಗೊತ್ತಿಲ್ಲ; ಏತನ್ಮಧ್ಯೆ, ಈಡಿ ಯಾವ ಮಾನದಂಡವನ್ನು ಆಧರಿಸಿ ತನ್ನ ವಿರುದ್ಧ ತನಿಖೆ ಕೈಗೆತ್ತಿಕೊಂಡಿದೆಯೋ ಗೊತ್ತಿಲ್ಲ ಎಂದು ಸುರೇಶ್ ಹೇಳಿದರು.
ನನ್ನ ಸಹೋದರಿಯ ಅಂತ ಮೌಖಿಕವಾಗಿ ಹೇಳಿ ಮೋಸ ಮಾಡಿದ್ದಾರೆ. ಅವರು ಮಾಡಿರುವ ವಂಚನೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಹಾಗಾಗಿ ಯಾಕೆ ನೋಟಿಸ್ ಕೊಟ್ಟಿದ್ದಾರೆ ಅನ್ನೋದು ವಿಚಾರಣೆಗೆ ಹೋದ ಮೇಲೆ ಗೊತ್ತಾಗುತ್ತೆ. ವಿಚಾರಣೆಗೆ ಸಂಪೂರ್ಣ ಸಹಕಾರ ಕೊಡುತ್ತೇನೆ. ಇಡಿ ನೋಟಿಸ್ ರಾಜಕೀಯದ ಇಲ್ವಾ ಅನ್ನೋದು ಅಲ್ಲಿ ಹೋದ ಮೇಲೆ ಗೊತ್ತಾಗುತ್ತೆ . ಅವರು ಕೇಳುವ ಪ್ರಶ್ನೆಗಳ ಮೇಲೆ ಇದಕ್ಕೆ ಸಂಬಂಧ ಇದೆಯಾ ಇಲ್ವಾ ಅನ್ನೋದು ಗೊತ್ತಾಗುತ್ತೆ.
ಯಾವುದಕ್ಕೆ ಸಂಬಂಧ ಇದೆ ಯಾವುದು ಅಸಂಬದ್ಧ ಇದೆ ಅಂತ ವಿಚಾರಣೆ ಮುಗಿದ್ಮೇಲೆ ಚರ್ಚೆ ಮಾಡಬೇಕಾಗುತ್ತೆ. ನನಗಾಗಲಿ ಆಯಮ್ಮನಿಗಾಗಲಿ ಯಾವುದೇ ಹಣಕಾಸಿನ ವ್ಯವಹಾರ ಏನು ಇಲ್ಲ. ಈ ಹಿಂದೆ ಕೂಡ ನಾನು ಅದನ್ನ ತಿಳಿಸಿದ್ದೇನೆ. ನಾನು ಅವರ ಎರಡು ಕಾರ್ಯಕ್ರಮಗಳಿಗೆ ಭೇಟಿ ಕೊಟ್ಟಿದ್ದೆ. ಇದನ್ನ ಹೊರತುಪಡಿಸಿದರೆ ಬೇರೆ ಏನು ಇಲ್ಲ. ಅವರು ನನ್ನ ಗೃಹ ಕಚೇರಿಯಲ್ಲಿ ಮೂರ್ನಾಲ್ಕು ಬಾರಿ ಭೇಟಿ ಮಾಡಿದ್ರು. ಕೆಲ ವಿಚಾರಗಳನ್ನು ಚರ್ಚೆ ಮಾಡಿದ್ರು.ನನ್ನ ಕ್ಷೇತ್ರದಲ್ಲಿ ಇದ್ದರು ಎನ್ನುವ ಕಾರಣಕ್ಕೆ ಅವರ ಕಾರ್ಯಕ್ರಮಕ್ಕೆ ಹೋಗಿದ್ದೆ.
ಎಲ್ಲ ವಿಚಾರಗಳನ್ನು ಅಧಿಕಾರಿಗಳಿಗೆ ಕೇಳ್ತಾರೆ ಅವರಿಗೆ ಹೇಳುತ್ತೇನೆ. ನನ್ನ ಧ್ವನಿಯನ್ನ ಮಿಮಿಕ್ರಿ ಮಾಡಿ ಬೇರೆಯವರಿಗೆಲ್ಲ ಮೋಸ ಮಾಡಿದ್ದಾರೆ. ಅದು ಕೂಡ ಪೊಲೀಸ್ ತನಿಖೆ ಕೂಡ ಮಾಡಿದ್ದಾರೆ. ಸುಮಾರು ಪ್ರಕರಣಗಳು ಪೊಲೀಸ್ ಸ್ಟೇಷನ್ನಲ್ಲಿ ದಾಖಲಾಗಿದೆ. ಆ ವಿಚಾರ ಏನಾಯ್ತು ಅಂತ ನನಗೆ ಗೊತ್ತಿಲ್ಲ. ಇಡಿ ಎಂಟ್ರಿ ಆಗಿದೆ, ಯಾವ ಮಾನದಂಡ ಇಟ್ಟುಕೊಂಡು ನನ್ನನ್ನು ಕರೆದಿದ್ದಾರೆ ಗೊತ್ತಿಲ್ಲ. ಇಡಿ ನೋಟಿಸೇ ಪ್ರಶ್ನೆಯಾಗಿದೆ. ಸುಪ್ರೀಂ ಕೋರ್ಟ್ ಹೈಕೋರ್ಟ್ ಅನೇಕ ಬಾರಿ ಇಡಿ ಬಗ್ಗೆ ಹೇಳಿದೆ.
ವ್ಯಾಪ್ತಿ ಮೀಡಿಇಡಿ ನಡಿತಾ ಇದೆ ಅಂತ ಹೇಳಿದೆ. ಆದಾಗ್ಯೂ ಎಚ್ಚೆತ್ತುಕೊಳ್ಳಲಿಲ್ಲ ಅಂದ್ರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಬರುತ್ತಿದೆ ಎಂದು ಅರ್ಥ. ಅವರ ವ್ಯಾಪ್ತಿಯನ್ನು ಹೊರತುಪಡಿಸಿ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವುದು ಕಾಣುತ್ತಿದೆ ಎಂದು ಡಿಕೆ ಸುರೇಶ್ ಹೇಳಿದರು.
