Ashwaveega News 24×7 ಫೆಬ್ರವರಿ 2026 – ಇತ್ತೀಚೆಗೆ ದಾಖಲೆ ಮಟ್ಟಕ್ಕೆ ಏರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು, ಕಳೆದ ಎರಡು ದಿನಗಳಿಂದ ದಿಢೀರ್ ಕುಸಿತ ಕಂಡು ಜನರಲ್ಲಿ ಗೊಂದಲ ಮೂಡಿಸಿವೆ. ಒಂದು ಲಕ್ಷ ರೂಪಾಯಿ ಗಡಿ ತಲುಪಿದ್ದ ಬೆಳ್ಳಿ ಬೆಲೆ ಇಳಿಕೆಯಾಗಿದ್ದು, ಬಂಗಾರದ ಬೆಲೆ ಕೂಡ ಸುಮಾರು 38 ಸಾವಿರ ರೂಪಾಯಿವರೆಗೆ ಕುಸಿತ ಕಂಡಿದೆ.
ಬಂಗಾರದ ಬೆಲೆ ಈ ಏರಿಳಿತಕ್ಕೆ ನಿಖರ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇನ್ನೂ ಬೆಲೆ ಇಳಿಯುತ್ತಾ ಅಥವಾ ಮತ್ತೆ ಏರಿಕೆಯಾಗುತ್ತಾ ಎಂಬ ಪ್ರಶ್ನೆಗೆ ಉತ್ತರ ಸಿಗದೆ ಗ್ರಾಹಕರು ಹಾಗೂ ಹೂಡಿಕೆದಾರರು ಅಯೋಮಯ ಸ್ಥಿತಿಯಲ್ಲಿ ಇದ್ದಾರೆ.
ಈ ಬೆಳವಣಿಗೆಗಳ ನಡುವೆ ಚಿನ್ನ–ಬೆಳ್ಳಿ ಬೆಲೆ ಏರಿಕೆಗೆ ಕೇಂದ್ರ ಬಜೆಟ್ನಲ್ಲಿ ಕಡಿವಾಣ ಬೀಳಬಹುದೇ ಎಂಬ ನಿರೀಕ್ಷೆ ಗಟ್ಟಿಯಾಗುತ್ತಿದೆ. ಆಮದು ಸುಂಕ, ತೆರಿಗೆ ವ್ಯವಸ್ಥೆ ಅಥವಾ ನೀತಿ ಬದಲಾವಣೆಗಳ ಮೂಲಕ ಸರ್ಕಾರ ಬೆಲೆ ನಿಯಂತ್ರಣಕ್ಕೆ ಮುಂದಾಗಬಹುದೇ ಎಂಬ ಚರ್ಚೆ ಜೋರಾಗಿದೆ.
ಹೀಗಾಗಿ ಈಗ ಎಲ್ಲರ ಚಿತ್ತ ಒಂದೇ ಕಡೆ— ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ನತ್ತ ಅಂತನೇ ಹೇಳಬಹುದು … ಚಿನ್ನಾಭರಣ ಖರೀದಿಗೆ ಕಾದಿರುವ ಸಾಮಾನ್ಯ ಜನರಿಂದ ಹಿಡಿದು ವ್ಯಾಪಾರಿಗಳು ಹಾಗೂ ಹೂಡಿಕೆದಾರರ ತನಕ, ಎಲ್ಲರೂ ಬಜೆಟ್ನಿಂದ ಗುಡ್ ನ್ಯೂಸ್ ನಿರೀಕ್ಷೆಯಲ್ಲಿ ಇದ್ದಾರೆ.

ಬಜೆಟ್ನಲ್ಲಿ ಚಿನ್ನದಾಟಕ್ಕೆ ಬ್ರೇಕ್ ಬೀಳುತ್ತಾ? ಅಥವಾ ಬೆಲೆ ಏರಿಳಿತದ ಆಟ ಮುಂದುವರಿಯುತ್ತಾ? ಎಲ್ಲ ಪ್ರಶ್ನೆಗಳಿಗೆ ಉತ್ತರ—ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಕಾದು ನೋಡಬೇಕಾಗಿದೆ ….
