Ashwaveega News 24×7 ಫೆಬ್ರವರಿ 20 – 2026 ಬೆಂಗಳೂರು : ಚಿನ್ನ ಮತ್ತು ಬೆಳ್ಳಿ ದರಗಳು ಸತತ ಎರಡನೇ ದಿನವೂ ಭಾರೀ ಏರಿಕೆ ಕಂಡು ಹೂಡಿಕೆದಾರರು ಹಾಗೂ ಗ್ರಾಹಕರಿಗೆ ಶಾಕ್ ನೀಡಿವೆ. ಗ್ಲೋಬಲ್ ಪಾಲಿಟಿಕ್ಸ್ನಲ್ಲಿ ನಡೆಯುತ್ತಿರುವ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪರಿಣಾಮವಾಗಿ ಅಮೂಲ್ಯ ಲೋಹಗಳ ಬೆಲೆಯಲ್ಲಿ ಮತ್ತೆ ರೆಕ್ಕೆ ಮೂಡಿದೆ.
ಇಂದು ಬೆಳಗ್ಗೆಯಿಂದಲೇ ಚಿನ್ನದ ಬೆಲೆಯಲ್ಲಿ ಸುಮಾರು 3 ಸಾವಿರ ರೂಪಾಯಿ ಜಿಗಿತ ದಾಖಲಾಗಿದೆ. 10 ಗ್ರಾಂ ಚಿನ್ನದ ಬೆಲೆ ಇದೀಗ 1.60 ಲಕ್ಷ ರೂಪಾಯಿಯ ಸನಿಹದಲ್ಲಿ ವಹಿವಾಟು ನಡೆಸುತ್ತಿದೆ. ಕ್ಷಣ ಕ್ಷಣಕ್ಕೂ ದರದಲ್ಲಿ ಬದಲಾವಣೆ ಕಾಣಿಸಿಕೊಂಡಿದ್ದು, ಸಂಜೆ ವೇಳೆಗೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಲಯಗಳು ಸೂಚಿಸಿವೆ.
ಬೆಳ್ಳಿಯ ಬೆಲೆಯಲ್ಲೂ ಇದೇ ತರಹ ಜಂಪ್ ಕಂಡುಬಂದಿದೆ. ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಇಂದು ಸುಮಾರು 3 ಸಾವಿರ ರೂಪಾಯಿ ಏರಿಕೆ ಕಂಡು, ದರ 2.53 ಲಕ್ಷ ರೂಪಾಯಿಗೆ ತಲುಪಿದೆ.
ಅಂತಾರಾಷ್ಟ್ರೀಯ ರಾಜಕೀಯ ಅಸ್ಥಿರತೆ, ಡಾಲರ್ ಮೌಲ್ಯದ ಏರುಪೇರು ಹಾಗೂ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನ-ಬೆಳ್ಳಿಯತ್ತ ಮುಖ ಮಾಡುವುದೇ ಈ ಏರಿಕೆಯ ಪ್ರಮುಖ ಕಾರಣವಂತೆ
ಮಾರುಕಟ್ಟೆ ಪರಿಸ್ಥಿತಿಯನ್ನು ಗಮನಿಸಿದರೆ ಮುಂದಿನ ಕೆಲ ದಿನಗಳಲ್ಲೂ ದರ ಏರಿಕೆಯ ಪ್ರವೃತ್ತಿ ಮುಂದುವರಿಯುವ ಸಾಧ್ಯತೆ ಇದೆ . ಗ್ರಾಹಕರು ಖರೀದಿ ನಿರ್ಧಾರ ಕೈಗೊಳ್ಳುವ ಮೊದಲು ತಾಜಾ ದರ ಪರಿಶೀಲಿಸುವಂತೆ ಜ್ವೆಲ್ಲರಿ ವಲಯ ಸಲಹೆ ನೀಡಿದೆ.
