Ashwaveega News 24×7 ಮಾರ್ಚ್ 01 – 2026 ಚಿಕ್ಕಬಳ್ಳಾಪುರ : ಇರಾನ್ನ ಧಾರ್ಮಿಕ ನಾಯಕ ಆಯತುಲ್ಲಾ Ali Khamenei ಅವರ ಹತ್ಯೆಯ ಸುದ್ದಿಯ ಹಿನ್ನೆಲೆಯಲ್ಲಿ ಕರ್ನಾಟಕದ ಕೆಲವು ಭಾಗಗಳಲ್ಲಿ ಸಂತಾಪ ವ್ಯಕ್ತವಾಗಿದೆ. ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಅಲೀಪುರದಲ್ಲಿ ಭಾವನಾತ್ಮಕ ವಾತಾವರಣ ನಿರ್ಮಾಣವಾಗಿದೆ.
ಅಲೀಪುರದಲ್ಲಿ ಶಿಯಾ ಪಂಗಡದ ಮುಸ್ಲಿಮರು ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಿದ್ದಾರೆ . ಮಸೀದಿಗಳಲ್ಲಿ ವಿಶೇಷ ನಮಾಜ್ ಸಲ್ಲಿಸಲಾಗಿದ್ದು, ಭಕ್ತರು ಕಣ್ಣೀರಿಡುತ್ತಾ ಪ್ರಾರ್ಥನೆ ಸಲ್ಲಿಸಿದರು.
1986ರಲ್ಲಿ ಖಮೇನಿ ಅಲೀಪುರಕ್ಕೆ ಭೇಟಿ ನೀಡಿದ್ದರೆಂಬ ನಂಬಿಕೆ ಸಮುದಾಯದಲ್ಲಿ ಜೀವಂತವಾಗಿದೆ. ಅಲ್ಲದೆ, ಅಲೀಪುರದಲ್ಲಿ ಖಮೇನಿ ಹೆಸರಿನಲ್ಲೇ ಒಂದು ಅಸ್ಪತ್ರೆಯೂ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ.
ಅಲೀಪುರದಲ್ಲಿ ಖಮೇನಿ ಅಭಿಮಾನಿಗಳೇ ಹೆಚ್ಚು ಇರುವ ಹಿನ್ನೆಲೆಯಲ್ಲಿ, ಕಪ್ಪು ಬಾವುಟ ಪ್ರದರ್ಶನ ನಡೆಸಲಾಗಿದೆ. ಕೆಲವು ಅಂಗಡಿಗಳು ಸ್ವಯಂಪ್ರೇರಿತವಾಗಿ ಮುಚ್ಚಲ್ಪಟ್ಟಿದ್ದವು. ಶೋಕಾಚರಣೆಯ ಸಂದರ್ಭದಲ್ಲಿ ಶಾಂತಿ ಮತ್ತು ಸಾಮರಸ್ಯ ಕಾಪಾಡುವಂತೆ ಸ್ಥಳೀಯ ಮುಖಂಡರು ಮನವಿ ಮಾಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕೈಗೊಂಡಿದೆ.
ಒಟ್ಟಾರೆ, ಅಲೀಪುರದಲ್ಲಿ ಖಮೇನಿ ಅಭಿಮಾನಿಗಳಲ್ಲಿ ದುಃಖದ ವಾತಾವರಣ ಕಂಡುಬಂದಿದ್ದು, ಮಸೀದಿಗಳಲ್ಲಿ ಪ್ರಾರ್ಥನೆ ವೇಳೆ ಭಾವುಕ ಕ್ಷಣಗಳು ಮೆರೆಯುತ್ತಿದ್ದವು …
