Ashwaveega News 24×7 ನವೆಂಬರ್. 24: ರಿಲೀಸ್ ಗು ಮುನ್ನವೇ ಕಿಚ್ಚನ ಅಭಿಮಾನಿಗಳಿಗೆ ಮಾರ್ಕ್ ತಂಡ ಗುಡ್ ನ್ಯೂಸ್ ಕೊಟ್ಟಿದೆ.
ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್ಟೆಲ್, ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದರ ಜೊತೆ ಅಧಿಕೃತವಾಗಿ ಕೈಜೋಡಿಸಿದೆ.

ಈ ವರ್ಷದ ಬಹುನಿರೀಕ್ಷಿತ, ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರದ ಜೊತೆ ಏರ್ಟೆಲ್ ಕಂಪನಿ ಒಪ್ಪಂದ ಮಾಡಿಕೊಂಡಿದೆ.
ಸ್ಯಾಂಡೆಲ್ವುಡ್ ಬಾದಷಾ ಅಭಿನಯದ ಮಾರ್ಕ್ ಚಿತ್ರವು ಡಿಸೆಂಬರ್ 25 ರಂದು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ಜೊತೆಗೆ ಏರ್ಟೆಲ್ ಕಂಪನಿಯು ತನ್ನ ಗ್ರಾಹಕರಿಗೆ ವಿಶೇಷ ಆಫರ್ ನೀಡುತ್ತಿದ್ದು. ಈ ಸಂಭ್ರಮವನ್ನು ಆಚರಿಸಲು ಏರ್ಟೆಲ್ “ಮಾರ್ಕ್ ಎಕ್ಸ್ಕ್ಲೂಸಿವ್ ಪ್ಯಾಕ್” ಅನ್ನು ಪರಿಚಯಿಸಿದೆ.

- ಇದರ ಅಡಿಯಲ್ಲಿ, ಗ್ರಾಹಕರು ಹೊಸದಾಗಿ ಬಿಡುಗಡೆಯಾದ ‘9 ಸೀರೀಸ್’ (9 series) ನಂಬರ್ಗಳಿರುವ ಸಿಮ್ ಕಾರ್ಡ್ಗಳನ್ನು ಪಡೆಯಬಹುದು.
- ಅಷ್ಟೇ ಅಲ್ಲದೆ, ಅಭಿಮಾನಿಗಳಿಗಾಗಿ ಒಂದು ವಿಶೇಷ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದ್ದು, ಇದರಲ್ಲಿ ಗೆಲ್ಲುವ 100 ಅದೃಷ್ಟಶಾಲಿಗಳಿಗೆ ‘ಮಾರ್ಕ್’ ಚಿತ್ರದ ಉಚಿತ ಟಿಕೆಟ್ಗಳನ್ನು ಬಹುಮಾನವಾಗಿ ನೀಡಲಾಗುವುದು.
ಈ ಒಪ್ಪಂದದ ಅಂಗವಾಗಿ ಏರ್ಟೆಲ್ ಕರ್ನಾಟಕದ ಸಿಇಒ ರಜನೀಶ್ ವರ್ಮಾ ಅವರು ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದರು.
ವಿಜಯ್ ಕಾರ್ತಿಕೇಯನ್ ನಿರ್ದೇಶನದ ಈ ಚಿತ್ರವನ್ನು ಸತ್ಯಜ್ಯೋತಿ ಫಿಲ್ಮ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ.

ಮಾರ್ಕ್ ಚಿತ್ರದ ಕಿಚ್ಚನ ಕರ್ಲಿ ಹೈರ್ಸ್ಟೈಲ್ ಗೆ ಅಭಿಮಾನಿಗಳು ಫಿದಾ ಆಗಿದ್ರು ಸೋಶಿಯಲ್ ಮೀಡಿಯಾ ದಲ್ಲಿ ಕೂಡ ಸಾಕಷ್ಟು ಟ್ರೆಂಡ್ ಮಾಡಿತ್ತು ಕಿಚ್ಚ ನ ಈ ಲುಕ್.
ಇದೀಗ ಮಾರ್ಕ್ ತಂಡ ದೊಂದಿಗಿನ ಸಹಭಾಗಿತ್ವದಿಂದಾಗಿ ರಿಲೀಸ್ ಗು ಮುನ್ನವೇ ಅಭಿಮಾನಿಗಳಿಗೆ ಸಿಹಿಸುದ್ದಿಯನ್ನ ಕೊಟ್ಟಿದೆ.
