Ashwaveega News 24×7 ಫೆಬ್ರವರಿ 18 -2026 : ಬೆಂಗಳೂರು : ನಗರದಲ್ಲಿನ Chandra Layout ಪ್ರದೇಶದಲ್ಲಿ ಇಂದು ಬೆಳಗ್ಗೆ ಖಾಸಗಿ ಬಸ್ಗೆ ಬೆಂಕಿ ತಗುಲಿ ಭಾರಿ ಆತಂಕ ಸೃಷ್ಟಿಯಾಯಿತು . ಬೆಳಗ್ಗೆ ಸುಮಾರು 10.15ರ ವೇಳೆಗೆ ಈ ಘಟನೆ ಸಂಭವಿಸಿದೆ.
ಮಾಹಿತಿ ಪ್ರಕಾರ, ಚಾಲಕ ರಸ್ತೆ ಬದಿಯಲ್ಲಿ ಬಸ್ ಪಾರ್ಕ್ ಮಾಡಿ ತೆರಳಿದ್ದ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ . ಕೆಲವೇ ನಿಮಿಷಗಳಲ್ಲಿ ಬೆಂಕಿ ವ್ಯಾಪಕವಾಗಿ ಹಬ್ಬಿ ಬಸ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ.
ಅಗ್ನಿ ಅವಘಡದ ವೇಳೆ ಬಸ್ನ ಟೈರ್ಗಳು ಬ್ಲಾಸ್ಟ್ ಆಗಿ ಸದ್ದು ಮಾಡಿದ್ದು, ಪರಿಣಾಮವಾಗಿ ಬೆಂಕಿ ಇನ್ನಷ್ಟು ಜೋರಾಗಿ ಉರಿಯ ತೊಡಗಿತು. ಸುತ್ತಮುತ್ತಲಿನ ನಿವಾಸಿಗಳು ಮತ್ತು ಪ್ರಯಾಣಿಕರಲ್ಲಿ ಭೀತಿ ಉಂಟಾಯಿತು.
ಅದೃಷ್ಟವಶಾತ್, ಘಟನೆ ವೇಳೆ ಬಸ್ನಲ್ಲಿ ಯಾರೂ ಇರಲಿಲ್ಲ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ. ಬೆಂಕಿಗೆ ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿಯಬೇಕಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
