Ashwaveega News 24×7 ಮಾರ್ಚ್ 03– 2026 : ರಶ್ಮಿಕಾ–ವಿಜಯ್ ದಂಪತಿಯ ‘ಬ್ಯೂಟಿ’ಫುಲ್ ಫೋಟೋ ವೈರಲ್ – ಸಂಗೀತ್ ಸಂಭ್ರಮದಲ್ಲಿ ಕ್ಯೂಟ್ ಕಪಲ್ ಕಮಾಲ್ !
ಚಿತ್ರರಂಗದ ಮೆಚ್ಚಿನ ನಟಿ Rashmika Mandanna ಮತ್ತು ಅವರ ಪತಿ ವಿಜಯ್ ಅವರ ಸಂಗೀತ್ ಸಂಭ್ರಮದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ. ಮದುವೆ ಹಿಂದಿನ ದಿನ ನಡೆದ ಸಂಗೀತ್ ಕಾರ್ಯಕ್ರಮದಲ್ಲಿ ದಂಪತಿ ಕ್ಯೂಟ್ ಲುಕ್ನಲ್ಲಿ ಮಿಂಚಿದ್ದಾರೆ .
ಪತಿ ವಿಜಯ್ ಜೊತೆ ಕುಣಿದು ಕುಪ್ಪಳಿಸಿದ್ದ ಆಂಧ್ರ ಸೊಸೆ ರಶ್ಮಿಕಾ, ಕುಟುಂಬದವರ ಹಾಗೂ ಅತ್ಯಾಪ್ತರ ಜೊತೆ ಹಾಡು-ನೃತ್ಯದಲ್ಲಿ ತೊಡಗಿಸಿಕೊಂಡಿದ್ದರು. ಪ್ರೀತಿ, ಕಣ್ಣೀರು, ನಗು ಹಾಗೂ ಸಂಗೀತದಿಂದ ತುಂಬಿ ಹೋಗಿದ್ದ ಈ ಸಂಭ್ರಮದ ಕ್ಷಣಗಳು ಎಲ್ಲರ ಮನಸೆಳೆಯುವಂತಾಗಿವೆ.
“ನೃತ್ಯ ಮಾಡಿದೆವು, ಅದ್ಭುತವಾದ ಕ್ಷಣಕ್ಕೆ ಸಾಕ್ಷಿಯಾದೆವು” ಎಂದು ರಶ್ಮಿಕಾ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಕುಟುಂಬ ಸಮೇತ ಕಳೆದ ಈ ವಿಶೇಷ ಕ್ಷಣಗಳು ಅವರ ಅಭಿಮಾನಿಗಳಿಗೆ ಮತ್ತಷ್ಟು ಆಪ್ತತೆಯನ್ನುಂಟುಮಾಡಿವೆ.
ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಪಡೆದ ರಶ್ಮಿಕಾ ಅವರ ಈ ಫೋಟೋಗಳು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿವೆ. ಕ್ಯೂಟ್ ಕಪಲ್ನ ಈ ‘ಬ್ಯೂಟಿ’ಫುಲ್ ಕ್ಷಣಗಳು ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿವೆ.
