Ashwaveega News 24×7 ಫೆಬ್ರವರಿ 23 – 2026 ಬೆಂಗಳೂರು : ಸಿಗರೇಟ್ನ ಹಣ ಕೇಳಿದ್ದಕ್ಕೆ ಕಾಂಡಿಮೆಂಟ್ಸ್ ಅಂಗಡಿ ಮಾಲೀಕನ ಮೇಲೆ ರೌಡಿಶೀಟರ್ ಹಾಗೂ ಅವನ ಸ್ನೇಹಿತರಿಂದ ದಾಳಿ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಬ್ಯಾಟರಾಯನಪುರ ಪ್ರದೇಶದ ಕಾಂಡಿಮೆಂಟ್ಸ್ ಅಂಗಡಿಯಲ್ಲಿ ನಿನ್ನೆ ರಾತ್ರಿ ಸುಮಾರು 9.30ರ ಸುಮಾರಿಗೆ ಈ ಘಟನೆ ನಡೆದಿದೆ. ರೌಡಿಶೀಟರ್ ಮಂಜೇಶ್ ಹಾಗೂ ಅವನ ಸ್ನೇಹಿತ ಅಂಗಡಿಗೆ ಬಂದು ಸಿಗರೇಟ್ ಕೇಳಿದ್ದರೆಂದು ತಿಳಿದುಬಂದಿದೆ . ಸಿಗರೇಟ್ ನೀಡಿದ ಬಳಿಕ ಹಣ ಕೇಳಿದ್ದಕ್ಕೆ ಪುಂಡರು ಆಕ್ರೋಶಗೊಂಡು ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ .
ಮಾಲೀಕನನ್ನು ಬೆದರಿಸಲು ಡ್ರ್ಯಾಗರ್ ತೋರಿಸಿ ಅಂಗಡಿ ಮೇಲೆ ದಾಳಿ ನಡೆಸಿದ ಆರೋಪವೂ ಇದೆ. ಅಂಗಡಿಯಲ್ಲಿ ಇರಿಸಿದ್ದ ವಸ್ತುಗಳನ್ನು ಹೊಡೆದು ಒಡೆದು ಹಾನಿ ಮಾಡಲಾಗಿದೆ . ಮಧ್ಯೆ ಬಂದ ಗ್ರಾಹಕರ ಮೇಲೂ ಹಲ್ಲೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಘಟನೆ ಕುರಿತು Byatarayanapura Police Station ನಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.
ಸಣ್ಣ ವಿಷಯಕ್ಕೂ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ …
