Ashwaveega News 24×7 ಜನವರಿ 15 -Makar Sankranti 2026 -ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷದಂತೆ ಈ ಬಾರಿಯೂ ಮಕರ ಸಂಕ್ರಾಂತಿ ಹಬ್ಬದಂದು ತಮ್ಮ ನಿವಾಸದಲ್ಲಿ ಗೋ ಪೂಜೆ ಮಾಡಿ, ಹಸುಗಳಿಗೆ ಹುಲ್ಲು, ಮೇವು ತಿನ್ನಿಸಿ ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಆಚರಿಸಿದ್ದಾರೆ. ಈ ಕಾರ್ಯಕ್ರಮದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
ಹೌದು ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಕ್ರಾಂತಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ತಮ್ಮ ನಿವಾಸದಲ್ಲಿ ಗೋವುಗಳಿಗೆ ಮೇವು ನೀಡಿದ ಪ್ರಧಾನಿ ಮೋದಿ, ಅವುಗಳೊಂದಿಗೆ ಸ್ವಲ್ಪ ಸಮಯ ಕಳೆಯುವುದರ ಮೂಲಕ ಹಬ್ಬದ ವಿಶೇಷತೆಯನ್ನು ಮೆರೆದಿದ್ದಾರೆ. ಈ ಮೂಲಕ ಅವರು ಭಾರತೀಯ ಸಂಪ್ರದಾಯ ಮತ್ತು ಸಾಂಸ್ಕೃತಿಕ ಮೌಲ್ಯಗಳಿಗೆ ಗೌರವ ತೋರಿಸಿದ್ದಾರೆ. ಮೋದಿ ಅವರ ಗೋಸೇವೆ, ಅವರ ವೈಯಕ್ತಿಕ ಜೀವನದಲ್ಲಿ ಸಂಪ್ರದಾಯವನ್ನು ಪಾಲಿಸುವ ಒಂದು ಸೂಚಕವಾಗಿದೆ.

