Ashwaveega News 24×7 ಡಿಸೆಂಬರ್. 09: ಕೆಜಿಎಫ್ ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದರ ನಡುವೆ ಕಾಂತಾರ ಸಿರೀಸ್ ಬಿಡುಗಡೆಯಾಗಿದೆ. ಮತ್ತೆ ದೇಶದಲ್ಲಿ ಅಬ್ಬರಿಸಲು ದೇಶಾದ್ಯಂತ ಅಭಿಮಾನಿಗಳು ಯಶ್ ಸಿನಿಮಾಗಾಗಿ ಕಾಯುತ್ತಿದ್ದಾರೆ.
ಈ ಕುತೂಹಲ ನಡುವೆ ಯಶ್ ಇದೀಗ ತಮ್ಮ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಟಾಕ್ಸಿಕ್ ಸಿನಿಮಾ ಕುರಿತು ಇದುವರೆಗೆ ಬಿಡುಗಡೆ ಮಾಡಿದ ಪೋಸ್ಟರ್, ಪ್ರೋಮೋಗಳು ಸಿನಿಮಾ ಕುತೂಹಲ ಹೆಚ್ಚಿಸಿತ್ತು. ಆ್ಯಂಗ್ರಿ ಯಂಗ್ ಮ್ಯಾನ್ ಸೇರಿದಂತೆ ಹಲವು ಶೇಡ್ಗಳ ರೀತಿಯಲ್ಲಿ ಈ ಪೋಸ್ಟರ್ ಗಮನಸೆಳೆದಿತ್ತು.
ಆದರೆ ಇದೀಗ ಬಿಡುಗಡೆ ಮಾಡಿದ ಪೋಸ್ಟರ್ನಲ್ಲಿ ಯಶ್ ಮಸಲ್ ಮ್ಯಾನ್ ಆಗಿ ಕುಳಿತಿರುವ ದೃಶ್ಯವಿದೆ. ಬಾತ್ಟಬ್ನಲ್ಲಿ ಕುಳಿತಿರುವ ಫೋಸ್ ಸಿನಿಮಾದ ಮೇಲಿನಿ ನಿರೀಕ್ಷೆ ಹೆಚ್ಚಿಸಿದೆ.
ಟಾಕ್ಸಿಕ್ ಪೋಸ್ಟರ್ ಅಲ್ಲಿ ಯಶ್ ಬ್ಯಾಕ್ ಲುಕ್ ಇದೆ. ಭುಜದ ಹಿಂಭಾಗದಲ್ಲಿ ಟ್ಯಾಟೂ ಇದೆ. ಇದಕ್ಕೆ ಏನೋ ಅರ್ಥ ಇದ್ದಂತೆ ಇದೆ. ಲಾಂಗ್ ಹೇರ್ ಅಲ್ಲಿಯೇ ಯಶ್ ಕಾಣಿಸುತ್ತಿದ್ದಾರೆ. ಆದರೆ, ಹೇರ್ ಅನ್ನ ಓಪನ್ ಬಿಟ್ಟಿದ್ದಾರೆ.
ಬಾತ್ ಟಬ್ ಅಲ್ಲಿಯೇ ಯಶ್ ಕುಳಿತಿದ್ದಾರೆ. ಕಟ್ಟಿಗೆಯ ಈ ಬಾತ್ ಟಬ್ನಿಂದಲೇ ಕಿಟಕಿ ಹೊರಗೆ ನೋಡ್ತಿದ್ದಾರೆ. ಈ ಒಂದು ಪೋಸ್ಟರ್ ಈಗಲೇ ಒಂದು ಕುತೂಹಲ ಮೂಡಿಸಿದೆ.
ಟಾಕ್ಸಿಕ್ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ ಯಶ್, ಇನ್ನು 100 ದಿನ ಮಾತ್ರ ಎಂದು ಕೌಂಡ್ಡೌನ್ ಶುರು ಮಾಡಿದ್ದಾರೆ. 2026ರ ಮಾರ್ಚ್ನ 19ರಂದು ಸಿನಿಮಾ ಬಿಡುಗಡೆಯಾಗಲಿದೆ. ಈ ಮೂಲಕ ಯಶ್ ಸಿನಿಮಾ ಬಿಡುಗಡೆ ದಿನಾಂಕವನ್ನು ಮತ್ತೊಮ್ಮೆ ಖಚಿತಪಡಿಸಿದ್ದಾರೆ.
ಈ ಬಾರಿಯ ಯುಗಾದಿ ಹಬ್ಬಕ್ಕೆ ಯಶ್ ಟಾಕ್ಸಿಕ್ ಸಿನಿಮಾ ಬಿಡುಗಡೆಯಾಗುತ್ತಿದೆ. ಈಗಾಗಲೇ ಪೋಸ್ಟರ್ ಅಭಿಮಾನಿಗಳ ಥ್ರಿಲ್ ಡಬಲ್ ಮಾಡಿದೆ. ಮಾರ್ಚ್ನಿಂದ ಯಶ್ ಅಬ್ಬರ ಶುರುವಾಗಲಿದೆ. ಇಡಿ ದೇಶವೇ ಈ ಸಿನಿಮಾಗಾಗಿ ಕಾಯುತ್ತಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
