Ashwaveega News 24×7 ಫೆಬ್ರವರಿ 23 – 2026 ಬೆಂಗಳೂರು : ರಾಜ್ಯ ಕಾಂಗ್ರೆಸ್ನಲ್ಲಿ ಪವರ್ ಫೈಟ್ ಚರ್ಚೆಗಳು ಜೋರಾಗಿರುವ ನಡುವೆಯೇ ಸಂಪುಟ ಪುನಾರಚನೆ ಬೇಡಿಕೆ ಹೊಸ ತಿರುವು ಪಡೆದಿದೆ . 31ಕ್ಕೂ ಹೆಚ್ಚು ಶಾಸಕರು ಸಚಿವ ಸಂಪುಟ ರಿಶಫಲ್ ಮಾಡುವಂತೆ ಹೈಕಮಾಂಡ್ಗೆ ಪತ್ರ ರವಾನಿಸಿರುವ ಮಾಹಿತಿ ಲಭ್ಯವಾಗಿದೆ.
ಮುಖ್ಯಮಂತ್ರಿ Siddaramaiah ನೇತೃತ್ವದ ಸರ್ಕಾರದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಉಪ ಮುಖ್ಯಮಂತ್ರಿ D. K. Shivakumar ಬಣ, ಸಿಎಂ ಬಣ ಹಾಗೂ ತಟಸ್ಥ ಶಾಸಕರು ಸೇರಿ ಈ ಪತ್ರ ಸಮರ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಐವರು ನೂತನ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು, ತಮ್ಮನ್ನೂ ಸಂಪುಟಕ್ಕೆ ಪರಿಗಣಿಸಬೇಕು ಎಂದು ಹಲವು ಶಾಸಕರು ಒತ್ತಾಯಿಸಿದ್ದಾರೆ . ಈ ಕುರಿತು ರಾಜ್ಯ ಉಸ್ತುವಾರಿ Randeep Singh Surjewala ಅವರಿಗೆ ಪತ್ರ ರವಾನಿಸಲಾಗಿದೆ.
ಸಂಪುಟ ಲಾಬಿಯಲ್ಲಿ ‘ಆ ಬಣ – ಈ ಬಣ’ ಎನ್ನುವ ಚರ್ಚೆ ಮಧ್ಯೆ ಎಲ್ಲ ಬಣಗಳ ಶಾಸಕರೂ ಸಹಿ ಹಾಕಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಆದರೆ ಇಷ್ಟೊಂದು ಶಾಸಕರ ಸಹಿಗಳು ಅಸಲಿನಾ ? ನಕಲಿನಾ ? ಎಂಬ ಪ್ರಶ್ನೆಯೂ ಎದ್ದಿದೆ.
140ಕ್ಕೂ ಹೆಚ್ಚು ಶಾಸಕರು ಇರುವ ಪಕ್ಷದಲ್ಲಿ ಹೊಸಬರಿಗೆ ಆದ್ಯತೆ ಸಿಗುತ್ತದೆಯೇ? ಅಥವಾ ಹೈಕಮಾಂಡ್ ಸಮತೋಲನ ರಾಜಕೀಯವೇ ಮುಂದುವರಿಸುತ್ತದೆಯೇ ? ಎಂಬ ಚರ್ಚೆ ತೀವ್ರವಾಗಿದೆ.
ಸಂಪುಟ ಪುನಾರಚನೆ ಕುರಿತಂತೆ ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ. ಕಾಂಗ್ರೆಸ್ ‘ಕೈ’ ಪಡೆಯಲ್ಲಿ ಈ ಪತ್ರ ಸಮರ ರಾಜಕೀಯ ಸಮೀಕರಣಗಳನ್ನು ಬದಲಾಯಿಸುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.
