Ashwaveega News 24×7 ಫೆಬ್ರವರಿ 24 – 2026 ಬೆಂಗಳೂರು : ಜಾಗತಿಕ ಮಾರುಕಟ್ಟೆ ಪ್ರಭಾವದಿಂದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮತ್ತೆ ಗಗನಕ್ಕೇರಿವೆ. ವಿಶ್ವ ಆರ್ಥಿಕ ಅನಿಶ್ಚಿತತೆ, ಡಾಲರ್ ಮೌಲ್ಯದಲ್ಲಿನ ಏರುಪೇರು ಹಾಗೂ ಸುರಕ್ಷಿತ ಹೂಡಿಕೆಗಳತ್ತ ಹೂಡಿಕೆದಾರರ ಒಲವು ಹೆಚ್ಚಾದ ಹಿನ್ನೆಲೆಯಲ್ಲಿ ದರಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ.
ನಿನ್ನೆ ಒಂದೇ ದಿನ ಬೆಳ್ಳಿ ದರ ಬರೋಬ್ಬರಿ ₹25,000 ಏರಿಕೆಯಾಗಿ ಕೆಜಿ ಬೆಲೆ ₹3 ಲಕ್ಷದ ಗಡಿ ತಲುಪಿದೆ. ಇತ್ತೀಚಿನ ಅತೀದೊಡ್ಡ ಕ್ರಾಶ್ ನಂತರ ಬೆಳ್ಳಿ ಮಾರುಕಟ್ಟೆಯಲ್ಲಿ ಭಾರೀ ಚೇತರಿಕೆ ಕಂಡುಬಂದಿರುವುದು ಗಮನಾರ್ಹ.
ಸಿಲ್ವರ್ ಮಾತ್ರವಲ್ಲ, ಬಂಗಾರದ ಬೆಲೆಯಲ್ಲೂ ಕಮಾಲ್ ಕಂಡುಬಂದಿದೆ. 10 ಗ್ರಾಂ ಚಿನ್ನದ ದರ ₹1 ಲಕ್ಷ 65 ಸಾವಿರ ರೂಪಾಯಿಗೆ ಏರಿಕೆಯಾಗಿದೆ . ದಿನದಿಂದ ದಿನಕ್ಕೆ, ಕ್ಷಣಕ್ಷಣಕ್ಕೂ ದರಗಳಲ್ಲಿ ಬದಲಾವಣೆ ಆಗುತ್ತಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ.
ಜುವೆಲ್ಲರಿ ಖರೀದಿಸಲು ಯೋಜನೆ ಮಾಡಿದ್ದ ಆಭರಣ ಪ್ರಿಯರಿಗೆ ಮತ್ತೆ ಬಿಗ್ ಶಾಕ್ ಎದುರಾಗಿದೆ . ಮದುವೆ ಹಾಗೂ ಹಬ್ಬದ ಸೀಸನ್ ಹಿನ್ನೆಲೆ ಬೇಡಿಕೆ ಹೆಚ್ಚಿರುವ ಸಮಯದಲ್ಲಿ ದರ ಏರಿಕೆ ಹೆಚ್ಚುವರಿ ಭಾರ ತಂದಿದೆ .
ಇಂದು ಷೇರುಪೇಟೆ ಓಪನ್ ಆದ ಬಳಿಕ ಮತ್ತೆ ದರ ಜಂಪ್ ಆಗುವ ಸಾಧ್ಯತೆ ಇರುವುದಾಗಿ ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಟ್ರೆಂಡ್, ರೂಪಾಯಿ – ಡಾಲರ್ ವಿನಿಮಯ ದರ ಹಾಗೂ ಹೂಡಿಕೆದಾರರ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಲಿವೆ
ಒಟ್ಟಿನಲ್ಲಿ, ಚಿನ್ನ-ಬೆಳ್ಳಿ ದರ ಏರಿಕೆ ಗ್ರಾಹಕರಿಗೆ ಮತ್ತೊಮ್ಮೆ ಆಘಾತ ನೀಡಿದ್ದು, ಮುಂದಿನ ಕೆಲವು ದಿನಗಳು ಮಾರುಕಟ್ಟೆಯಲ್ಲಿ ತೀವ್ರ ಚಟುವಟಿಕೆ ಮುಂದುವರಿಯುವ ಸಾಧ್ಯತೆ ಇದೆ.
