Ashwaveega News 24×7 ಫೆಬ್ರವರಿ 24 – 2026 ಬೆಂಗಳೂರು : ರಾಜಕೀಯ ವೇದಿಕೆಯಲ್ಲಿ ನಡೆದ ಒಂದು ಕ್ಷಣಿಕ ಘಟನೆ ಇದೀಗ ರಾಜ್ಯ ರಾಜಕೀಯದಲ್ಲಿ ಚರ್ಚೆಯಾಗಿದೆ. ‘ಡೈಲಾಗ್ ಕಿಂಗ್’ ಎಂದೇ ಖ್ಯಾತಿ ಪಡೆದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಸಾರ್ವಜನಿಕ ಕಾರ್ಯಕ್ರಮದ ವೇದಿಕೆಯಲ್ಲಿ ಮುಜುಗರದ ಕ್ಷಣ ಎದುರಾಯಿತು .
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದ ವೇಳೆ, ಪ್ರದೀಪ್ ಈಶ್ವರ್ ಪಕ್ಕದಲ್ಲೇ ನಿಂತು ಸಿಎಂ ಅವರನ್ನು ಹೊಗಳಿದರು. ಸಿಎಂ ಭಾಷಣದ ಉದ್ದಕ್ಕೂ ‘ಕೈ’ ಶಾಸಕ ಪಕ್ಕದಲ್ಲೇ ಇದ್ದರು. ಆದರೆ ನಂತರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಷಣ ಆರಂಭಿಸಿದ ವೇಳೆ, ಮತ್ತೆ ವೇದಿಕೆಯ ಪಕ್ಕಕ್ಕೆ ಬಂದ ಪ್ರದೀಪ್ ಈಶ್ವರ್ ಅವರತ್ತ ಡಿಸಿಎಂ ಸಡನ್ ರಿಯಾಕ್ಷನ್ ನೀಡಿದಂತೆ ಕಾಣಿಸಿಕೊಂಡಿತು.
ಡಿಕೆಶಿ ಭುಜ ತಟ್ಟಿ ‘ಏಯ್.. ಆ ಕಡೆ ಹೋಗು’ ಎನ್ನುವಂತೆ ಸೂಚನೆ ನೀಡಿದರೆಂದು ಹೇಳಲಾಗುತ್ತಿದೆ. ಈ ಘಟನೆ ಕ್ಷಣಿಕ ಗೊಂದಲಕ್ಕೆ ಕಾರಣವಾಯಿತು. ಡಿಸಿಎಂ ಪ್ರತಿಕ್ರಿಯೆಗೂಡಲೇ ಪ್ರದೀಪ್ ಈಶ್ವರ್ ಪೆಚ್ಚು ಮುಖ ಮಾಡಿಕೊಂಡು ಸೈಡಿಗೆ ಸರಿದ ದೃಶ್ಯ ಗಮನ ಸೆಳೆಯಿತು.
ಸಿಎಂ ಹೊಗಳಿ ಪಕ್ಕದಲ್ಲಿ ನಿಂತಿದ್ದುದೇ ಡಿಸಿಎಂ ಅಸಮಾಧಾನಕ್ಕೆ ಕಾರಣವಾಯಿತೇ ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಂದಿಲ್ಲ.
ವೇದಿಕೆಯ ಮೇಲಿನ ಈ ಸಣ್ಣ ಘಟನೆ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ಒಳರಾಜಕೀಯದ ಬಗ್ಗೆ ಹೊಸ ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ.
