Ashwaveega News 24×7 ಮಾರ್ಚ್ 01 – 2026 ಅಬುದಾಬಿ : ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ, ಅಬುದಾಬಿ ಏರ್ಪೋರ್ಟ್ನಲ್ಲಿ ಹಲವು ಪ್ರಯಾಣಿಕರು ಸಿಲುಕಿಕೊಂಡಿದ್ದು, ಅವರಲ್ಲಿ Drone Prathap ಕೂಡ ಇದ್ದಾರೆ.
ಬಿಗ್ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಅಬುದಾಬಿ ಪ್ರವಾಸಕ್ಕಾಗಿ ತೆರಳಿದ್ದರು. “ಮೊನ್ನೆ ರಾತ್ರಿ ನಾವು ಬೆಂಗಳೂರಿಗೆ ಹೊರಡಬೇಕಾಗಿತ್ತು. ಆದರೆ ಯುದ್ಧ ಪರಿಸ್ಥಿತಿಯಿಂದ ಏರ್ಸ್ಪೇಸ್ ಕ್ಲೋಸ್ ಆಗಿದ್ದು, ವಿಮಾನ ಹಾರಾಟ ಸಂಪೂರ್ಣ ಬಂದ್ ಆಗಿದೆ” ಎಂದು ಅವರು ತಿಳಿಸಿದ್ದಾರೆ.
“ಏನು ಮಾಡ್ಬೇಕು ಅನ್ನೋದೇ ಗೊತ್ತಾಗ್ತಿಲ್ಲ. ಮುಂದಿನ ಸೂಚನೆಗೆ ಕಾಯಿರಿ ಅಂತ ಹೇಳಿದ್ದಾರೆ. ಏರ್ಪೋರ್ಟ್ ಕ್ಲೋಸ್ ಆಗಿದ್ದು, ನಾವು ಎಲ್ಲರೂ ಹೊರಭಾಗದಲ್ಲೇ ಕಾಯುತ್ತಿದ್ದೇವೆ” ಎಂದು ಪ್ರತಾಪ್ ಹೇಳಿದ್ದಾರೆ.
ಅಬುದಾಬಿ ಏರ್ಪೋರ್ಟ್ನಲ್ಲಿ ಇನ್ನೂ ಹಲವಾರು ಕನ್ನಡಿಗರು ಸಿಲುಕಿಕೊಂಡಿದ್ದು, ಮುಂದಿನ ವಿಮಾನ ವೇಳಾಪಟ್ಟಿ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ . ಪ್ರಯಾಣಿಕರು ಏರ್ಲೈನ್ಸ್ ಅಧಿಕಾರಿಗಳ ಸೂಚನೆಗಾಗಿ ಕಾಯುತ್ತಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮವಾಗಿ ಹಲವು ದೇಶಗಳ ವಾಯುಪ್ರದೇಶ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದ್ದು, ಅಂತಾರಾಷ್ಟ್ರೀಯ ವಿಮಾನ ಸಂಚಾರದ ಮೇಲೆ ಗಂಭೀರ ಪರಿಣಾಮ ಬೀರಿದೆ.
ಸಿಲುಕಿರುವ ಕನ್ನಡಿಗರು ಸುರಕ್ಷಿತವಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದ್ದು, ಪರಿಸ್ಥಿತಿ ಸಾಮಾನ್ಯಗೊಂಡ ಬಳಿಕ ವಿಮಾನ ಸಂಚಾರ ಪುನರಾರಂಭವಾಗುವ ನಿರೀಕ್ಷೆಯಿದೆ.
