
ಕಳೆದ ಆಗಸ್ಟ್ʼನಲ್ಲಿ ದಂಗೆಗಳ ನಂತರ ಶೇಖ್ ಹಸೀನಾ ಸರ್ಕಾರ ಪತನವಾದ ಬಳಿಕ, ಬಾಂಗ್ಲಾದಲ್ಲಿ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಅಮೆರಿಕದ ಕೈಗೊಂಬೆಯಾಗಿದ್ದ ಈ ʼನೋಬಲ್ʼ ಮೊಹಮ್ಮದ್ ಯೂನಸ್ ಎಂಬ ಆಸಾಮಿ. ಬಾಂಗ್ಲಾದಲ್ಲಿ ಶೇಖ್ ಹಸೀನಾ ನೇತೃತ್ವದ ಸರ್ಕಾರ ಪುನಃ ಅಧಿಕಾರಕ್ಕೆ ಬರೋದು ಅಮೆರಿಕಾದ CIAಗೆ ಇಷ್ಟವಿರಲಿಲ್ಲ. ಆದರೆ CIAನ ನಿರಂತರ ಪ್ರಯತ್ನಗಳ ಹೊರತಾಗ್ಯೂ ಕೂಡ, ಬಾಂಗ್ಲಾದಲ್ಲಿ ಮತ್ತೆ ಶೇಖ್ ಹಸೀನಾ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು. ಇದನ್ನು ಅಮೆರಿಕಾಕ್ಕೆ ಸಹಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಬಾಂಗ್ಲಾದಲ್ಲಿ ವಿದ್ಯಾರ್ಥಿ ದಂಗೆಯ ಹೆಸರಿನಲ್ಲಿ ಶೇಖ್ ಹಸೀನಾ ಸರ್ಕಾರವನ್ನ ಪತನ ಮಾಡಿಸ್ತು ಅಮೆರಿಕಾದ CIA. ಆನಂತರ ಅಲ್ಲಿ ಅಮೆರಿಕಾಗೆ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ಒಬ್ಬ ವಿದೂಷಕ ಬೇಕಾಗಿತ್ತು. ಆಗ ಅವರಿಗೆ ಕಂಡದ್ದೇ ಈ ಮೊಹಮ್ಮದ್ ಯೂನಸ್ ಎಂಬ ಜೋಕರ್. ಆತನನ್ನೇ ಬಾಂಗ್ಲಾಕ್ಕೆ ಕಳುಹಿಸಿದ ಅಮೆರಿಕ, ಆತನನ್ನು ಬಾಂಗ್ಲಾದ ಮಧ್ಯಂತರ ಸರ್ಕಾರದ ಮುಖ್ಯಸ್ಥನನ್ನಾಗಿ ನೇಮಿಸಿತು. ಈ ಯೂನಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಬಾಂಗ್ಲಾದಲ್ಲಿ ಅರಾಜಕತೆ ಸೃಷ್ಟಿಯಾಯಿತು. ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಮಿತಿಮೀರಿದ ದೌರ್ಜನ್ಯ ಆರಂಭವಾಯಿತು. ಭಾರತ ವಿರೋಧಿ ಉಗ್ರ ಸಂಘಟನೆಗಳು ಅಲ್ಲಿ ಚಿಗುರಿಕೊಂಡವು.!!

ಆದರೆ ಇದೆಲ್ಲಾ ಹೆಚ್ಚು ದಿನ ನಡೆಯಲಿಲ್ಲ. ಯಾವಾಗ ಅಮೆರಿಕದಲ್ಲಿ ಅಧಿಕಾರ ಬದಲಾವಣೆಯಾಗಿ, ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದರೋ, ಆಗ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ಹೇಳಿ ಕೇಳಿ ಡೊನಾಲ್ಡ್ ಟ್ರಂಪ್ ಪೂರ್ಣ ಪ್ರಮಾಣದ ರಾಜಕಾರಣಿಯಲ್ಲ, ಆತ ಒಬ್ಬ ಪಕ್ಕಾ ಬ್ಯಸಿನೆಸ್ʼಮೆನ್!! ಅಮೆರಿಕಾವನ್ನೇ ಮತ್ತೆ ನಂಬರ್ ಒನ್ ಮಾಡಬೇಕಲು ಅನ್ನೋ ಕನಸಿರುವ ಮನುಷ್ಯ. ಇಂತಹ ವ್ಯಾಪಾರೀ ಮಾನೋಭಾವದ ವ್ಯಕ್ತಿಗೆ, ಯಾವುದೇ ಯುದ್ಧಗಳು, ಸಂಘರ್ಷಗಳು ಬೇಕಿಲ್ಲ. ಪಕ್ಕಾ ಬಲಪಂಥೀಯ ವಿಚಾರಧಾರೆಯ ಟ್ರಂಪ್, ಎಡಪಂಥೀಯ ಚಿಂತನೆಗಳನ್ನು ಬೆಂಬಲಿಸೋ ಮನುಷ್ಯ ಅಲ್ಲ. ಯಾವುದೇ ದೇಶದ ನೆಲವನ್ನು ಇನ್ನಾರದ್ದೋ ವಿರುದ್ಧ ಬಳಸೋದು, ಅದಕ್ಕೆ ಅಮೆರಿಕ ತನ್ನ ಸಂಪನ್ಮೂಲಗಳನ್ನ ಬಳಸೋದು ಇವೆಲ್ಲವೂ ಟ್ರಂಪ್ʼಗೆ ಸುತಾರಾಂ ಇಷ್ಟವಿಲ್ಲ. ಹಾಗಾಗಿ ಯಾವಾಗ ಅಮೆರಿಕದಲ್ಲಿ ಟ್ರಂಪ್ ಆಡಳಿತ ಶುರುವಾಯ್ತೋ, ಬಾಂಗ್ಲಾದಲ್ಲಿ ʼನೋಬಲ್ʼ ಯೂನಸ್ʼನ ಬುಡ ಅಲ್ಲಾಡೋದಕ್ಕೆ ಶುರುವಾಯ್ತು. ಟ್ರಂಪ್ ಬೇರೆ ನಾವು ಬಾಂಗ್ಲಾದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಮೂಗು ತೂರುಸೋದಿಲ್ಲ, ಅದನ್ನು ನಾವು ಭಾರತಕ್ಕೆ ಬಿಡುತ್ತಿದ್ದೇವೆ ಎಂದು ಬಹಿರಂಗವಾಗೇ ಹೇಳಿಕೆ ಕೊಟ್ಟರು.!
ಯಾವಾಗ ಬಾಂಗ್ಲಾದಲ್ಲಿ ಅಮರಿಕದ ಹಸ್ತಕ್ಷೇಪ ಕಡಿಮೆಯಾಯ್ತೋ, ಆಗ ಭಾರತದ RAW ಅಲ್ಲಿ active ಆಯ್ತು. ಅಲ್ಲಿನ ಸೇನಾ ಮುಖ್ಯಸ್ಥ ವಕಾರ್ ಉಜ್ ಜಮಾನ್ ಶೇಖ್ ಹಸೀನಾರ ಹತ್ತಿರದ ಸಂಬಂಧಿ ಹಾಗೂ ಸ್ವಲ್ಪ ಭಾರತದ ಪರ ನಿಲುವಿರುವ ವ್ಯಕ್ತಿ. ಆತನನ್ನೇ ರಾ. ಸಂಪರ್ಕಿಸಿದ್ದಿರಲೂಬಹುದು. ಟ್ರಂಪ್ ಆಡಳಿತ ಬಂದ ನಂತರ ಬಾಂಗ್ಲಾದಲ್ಲಿ ನಡೆಯುತ್ತಿದ್ದ ಹಿಂಸಾಚಾರಗಳು, ಹಿಂದೂಗಳ ವಿರುದ್ಧ ನಡೆಯುತ್ತಿದ್ದ ದಾಳಿಗಳು ನಿಧಾನವಾಗಿ ಕಡಿಮೆಯಾಗತೊಡಗಿದವು. ಹಸೀನಾ ಸರ್ಕಾರದ ವಿರುದ್ಧ ನಡೆದಂತೆಯೇ, ಯೂನಸ್ ಸರ್ಕಾರದ ವಿರುದ್ಧವೂ ಪ್ರತಿಭಟನೆಗಳು ಆರಂಭವಾದವೂ. ಈಗಂತೂ ಮೊಹಮ್ಮದ್ ಯೂನಸ್ ನೇತೃತ್ವದ ಸರ್ಕಾರದ ವಿರುದ್ಧ ಸಾವಿರಾರು ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರಮುಖ ಸೇನಾಧಿಕಾರಿಗಳು ರಾಜಧಾನಿ ಢಾಕಾದಲ್ಲಿ ಸಭೆ ಸೇರಿ ಚರ್ಚೆಯನ್ನೂ ನಡೆಸಿದ್ದಾರೆ. ಯೂನಸ್ ನೇತೃತ್ವದ ಸರ್ಕಾರ ಆಡಳಿತ ನಡೆಸಲು ಸಂಪೂರ್ಣ ವಿಫಲವಾಗಿರುವುದರಿಂದ, ಸೇನೆ ಆಡಳಿತವನ್ನು ತನ್ನ ಕೈಗೆ ತೆಗೆದುಕೊಳ್ಳಲು ಯೋಚಿಸುತ್ತಿದೆ ಎಂಬ ವರದಿಗಳಿವೆ. ಹಾಗಾಗಿ ಬಾಂಗ್ಲಾದಲ್ಲಿ ಈಗಿನ ಯೂನಸ್ ನೇತೃತ್ವದ ಸರ್ಕಾರದ ಆಯುಷ್ಯ ಹೆಚ್ಚು ದಿನ ಇಲ್ಲ ಎಂದೇ ಹೇಳಬಹುದು. ಯಾವಾಗ ಬೇಕಿದ್ದರೂ ಅಲ್ಲಿ ಸೇನಾಕ್ರಾಂತಿ ನಡೆದು, ಆಡಳಿತವನ್ನ ಸೇನೆ ತನ್ನ ಕೈಗೆ ತೆಗೆದುಕೊಳ್ಳಬಹುದು ಎಂಬ ಪರಿಸ್ಥಿತಿಯಿದೆ.!!