Ashwaveega News 24×7 ನವೆಂಬರ್. 14: ತೀವ್ರ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭೆ ಚುನಾವಣಾ ಫಲಿತಾಂಶ ಬಹುತೇಕ ಮುಕ್ತಾಯಗೊಂಡಿದೆ. ಕೆಲ ಕ್ಷೇತ್ರಗಳಲ್ಲಿ ಮತ ಎಣಿಕೆಯ ಸುತ್ತುಗಳು ಬಾಕಿಯಿದ್ದರೂ ಎನ್ಡಿಎ ಈಗಾಗಲೇ 204 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಪ್ರಚಂಡ ಬಹುಮತದತ್ತ ದಾಪುಗಾಲಿಟ್ಟಿದೆ.
ಬಿಹಾರದ ಬಹುತೇಕ ಎಲ್ಲ ಪ್ರಾಂತ್ಯಗಳಲ್ಲಿ ಎನ್ಡಿಎ ಮೇಲುಗೈ ಸಾಧಿಸಿದೆ. ಮೋದಿ-ನಿತಿಶ್ ಕುಮಾರ್ ಡಬಲ್ ಇಂಜಿನ್ ಸರ್ಕಾರಕ್ಕೆ ಜನರು ಬಹುಪರಾಕ್ ಎಂದಿದ್ದಾರೆ. ಮಹಿಳಾ ಮತದಾರರು ಎನ್ಡಿಎಗೆ ದೊಡ್ಡ ಪ್ರಮಾಣದ ಆರ್ಶಿವಾದ ಮಾಡಿದ್ದಾರೆ.
ಅದರಲ್ಲೂ ಬಿಜೆಪಿ ಬಿಹಾರದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಎನ್ಡಿಎ ಒಕ್ಕೂಟದಲ್ಲಿ ಬಿಜೆಪಿ 95, ಜೆಡಿಯು 82, ಎಲ್ಜೆಪಿ (ಆರ್ವಿ) 20, ಹೆಚ್ಎಎಮ್ (S) 5 ಹಾಗೂ ಆರ್ಎಲ್ಎಮ್ 4 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಆದ್ರೆ ಮಹಾಘಟಬಂಧನ್ ಮೈತ್ರಿಕೂಟದಲ್ಲಿ ಆರ್ಜೆಡಿ 25 ಸ್ಥಾನಗಳಲ್ಲಿದ್ದು, ಕಾಂಗ್ರೆಸ್ ಕೇವಲ 5 ಸ್ಥಾನಗಳಲ್ಲಷ್ಟೇ ಮುನ್ನಡೆ ಸಾಧಿಸಿದೆ.
ನಿತೀಶ್ ಅವರ 20 ವರ್ಷಗಳ ಆಡಳಿತದಲ್ಲಿ ಕಾನೂನು-ಸುವ್ಯವಸ್ಥೆ, ಮೂಲಸೌಕರ್ಯ (ರಸ್ತೆಗಳು, ಸೇತುವೆಗಳು) ಮತ್ತು ಅಭಿವೃದ್ಧಿ ಕಾರ್ಯಗಳು ಜನರ ಮೇಲೆ ಪರಿಣಾಮ ಬೀರಿವೆ. ಜೊತೆಗೆ ಮಹಿಳಾ ಪರ ಯೋಜನೆಗಳು ಸರ್ಕಾರದ ಕೈಹಿಡಿವೆ.
