Ashwaveega News 24×7 ನವೆಂಬರ್. 16:‘ಅಕಿರ’, ‘ವಾಸು ನಾನ್ ಪಕ್ಕಾ ಕಮರ್ಶಿಯಲ್’ ಮುಂತಾದ ಸಿನಿಮಾಗಳಲ್ಲಿ ಮಿಂಚಿರುವ ನಟ ಅನೀಶ್ ತೇಜೇಶ್ವರ್. ಇದೀಗ ಅನೀಶ್ ತೇಜೇಶ್ವರ್ ಅಭಿನಯಿಸಿರುವ ಹೊಸ ಸಿನಿಮಾ ‘ಲವ್ ಓಟಿಪಿ’ ನವೆಂಬರ್ 14 ರಂದು ತೆರೆಕಂಡಿತು.
‘ಲವ್ ಓಟಿಪಿ’ ಚಿತ್ರಕ್ಕೆ ಉತ್ತಮ ವಿಮರ್ಶೆಗಳು ಲಭಿಸಿವೆ. ಆದರೆ, ಥಿಯೇಟರ್ ಕಡೆಗೆ ಜನ ಬರುತ್ತಿಲ್ಲ. ಬಾಕ್ಸ್ ಆಫೀಸ್ನಲ್ಲಿ ಕಲೆಕ್ಷನ್ ಆಗುತ್ತಿಲ್ಲ. ಪರಿಣಾಮ, ಬೇಸರಗೊಂಡು ಅನೀಶ್ ತೇಜೇಶ್ವರ್ ಕಣ್ಣೀರು ಸುರಿಸಿದ್ದಾರೆ.
ಹೌದು. . ‘ಲವ್ ಓಟಿಪಿ’ ಸಿನಿಮಾಗೆ ಪ್ರೇಕ್ಷಕರು ಬರ್ತಿಲ್ಲ ಎಂದು ಹತಾಶರಾಗಿ ಫೇಸ್ಬುಕ್ನಲ್ಲಿ ಅನೀಶ್ ತೇಜೇಶ್ವರ್ ಪೋಸ್ಟ್ ಹಂಚಿಕೊಂಡಿದ್ದಾರೆ. ‘’ನಮಸ್ಕಾರ… ತುಂಬಾ ನೋವಿನಿಂದ ಹತಾಶೆಯಿಂದ ಈ ಮಾತುಗಳನ್ನ ಹೇಳ್ತಿದ್ದೀನಿ.
14 ವರ್ಷಗಳ ನಿರಂತರ ಶ್ರಮ. ಸೋಲುಗಳಿಗೆ ಕಂಗೆಡದೇ.. ಸಿನಿಮಾದಿಂದ ಸಿನಿಮಾಗೆ ಆಶಾದಾಯಕವಾಗೇ ಇಲ್ಲಿವರೆಗೂ ಬಂದೆ. ನನ್ನ ವೃತ್ತಿ ಬದುಕಿನಲ್ಲೇ The Best Reviews ಲವ್ OTPಗೆ ಸಿಕ್ಕಿದೆ.. ಸಿಕ್ತಿದೆ… ಆದ್ರೆ, ಥಿಯೇಟರಿಗೆ ಯಾಕ್ ಯಾರೂ ಬರ್ತಿಲ್ಲ…??? ನಾನು ಇನ್ನೇನ್ ಮಾಡ್ಬೇಕು..??? ಗೊತ್ತಾಗ್ತಿಲ್ಲ…!!! ಇವತ್ತು ನಾಳೆಯೊಳಗೆ ಪ್ರೇಕ್ಷಕರು ಬಂದ್ರೆ ಕೈ ಹಿಡಿದ್ರೆ ಮುಂದಿನ ದಾರಿ…. ಇಲ್ಲಾಂದ್ರೆ ಇಲ್ಲಿಗೆ ನನ್ನ ಸಿನಿಮಾ ಪ್ರಯತ್ನವನ್ನ ನಿಲ್ಲಿಸ್ತೀನಿ.
ತುಂಬಾ ದುಃಖದಿಂದ ಈ ವಿಚಾರ ಹೇಳ್ತಿದ್ದೀನಿ. ಈ ಕಣ್ಣೀರು ಸಿಂಪತಿಗಲ್ಲ… ಗಿಮಿಕ್ಕು ಅಲ್ಲ.. ನನ್ನ ಅಂತರಾಳದ ನೋವಿದು’’ ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡು ಅನೀಶ್ ತೇಜೇಶ್ವರ್ ವಿಡಿಯೋವೊಂದನ್ನೂ ಹಂಚಿಕೊಂಡಿದ್ದಾರೆ.
