Ashwaveega News 24×7 ನವೆಂಬರ್. 23: ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂದಾನ ಅವರ ತಂದೆಗೆ ದೃದಯಾಘಾತವಾಗಿದ್ದು, ಇಂದು ಪಲಾಶ್ ಮುಚ್ಚಲ್ ಜೊತೆ ನಡೆಯಬೇಕಿದ್ದ ಅವರ ವಿವಾಹ ಸಮಾರಂಭವನ್ನು ಮುಂದೂಡಲಾಗಿದೆ.
ಮಹರಾಷ್ಟ್ರದ ಸಾಂಗ್ಲಿಯ ಸ್ಯಾಮ್ಡೋಲಿ ರಸ್ತೆಯಲ್ಲಿರುವ ಮಂದಾನ ಫಾರ್ಮ್ ಹೌಸ್ನಲ್ಲಿ ಸ್ಮೃತಿ ಮತ್ತು ಪಲಾಶ್ ಅವರ ವಿವಾಹ ಸಮಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿದ್ದವು.
ಇದರ ನಡುವೆ ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಹೃದಯಾಘಾತವಾಗಿದೆ ಎಂದು ವರದಿಯಾಗಿದೆ. ಕೂಡಲೇ ಅವರನ್ನು ಸಾಂಗ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅತಿಥಿಗಳನ್ನು ವಾಪಸ್ ಕಳುಹಿಸಲಾಗುತ್ತಿದೆ ಮತ್ತು ವಿವಾಹ ಸ್ಥಳದಲ್ಲಿನ ಎಲ್ಲ ಕೆಲಸ ಕಾರ್ಯಗಳನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.
