Ashwaveega News 24×7 ಡಿಸೆಂಬರ್. 01: ಸಮಂತಾ ರುತ್ ಪ್ರಭು ಅವರು ಡಿ.1ರ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆ ಇಶಾ ಯೋಗ ಕೇಂದ್ರದೊಳಗಿನ ಲಿಂಗ್ ಭೈರವಿ ದೇವಸ್ಥಾನದಲ್ಲಿ ಮುಂಜಾನೆ ನಡೆದಿದೆ ಎಂದು ವರದಿಯಾಗಿದೆ.
ಒಟ್ಟು 30 ಅತಿಥಿಗಳ ಸಮ್ಮಖದಲ್ಲಿ ಮದುವೆ ನೆರವೇರಿದ್ದು, ಸಮಂತಾ ಮದುವೆಗೆ ಕೆಂಪು ಸೀರೆ ಉಟ್ಟಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
‘ಫ್ಯಾಮಿಲಿ ಮ್ಯಾನ್’ ಸೇರಿದಂತೆ ಹಲವು ಸರಣಿ ಮತ್ತು ಸಿನಿಮಾಗಳ ಮೂಲಕ ಗಮನ ಸೆಳೆದ ನಿರ್ದೇಶಕ ಜೋಡಿ ರಾಜ್ ಮತ್ತು ಡಿಕೆ ಅವರಲ್ಲಿ ಒಬ್ಬರು ರಾಜ್ ನಿಧಿಮೋರು. ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂದು ಈ ಹಿಂದೆಯೂ ವರದಿಗಳಿದ್ದವು.
ಕಳೆದ ತಿಂಗಳು ರಾಜ್ ಜೊತೆಗಿನ ಫೋಟೋವನ್ನು ಸಮಂತಾ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳ ಗಮನ ಸೆಳೆದಿತ್ತು.
ಇನ್ನು ಫ್ಯಾಮಿಲಿ ಮ್ಯಾನ್ ಸೀಸನ್ 2 ರಲ್ಲಿ ಸಮಂತಾ ನಟಿಸಿದ್ದರು. ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಭಾನುವಾರ ರಾತ್ರಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಇತ್ತ ರಾಜ್ ಅವರ ಮಾಜಿ ಪತ್ನಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದ ಸ್ಟೋರಿಯೂ ಈ ಸುದ್ದಿಗೆ ಪುಷ್ಟಿ ನೀಡಿತ್ತು. ‘ಆತುರದ ಜನರು ಆತುರವಾಗಿ ಕೆಲಸ ಮಾಡುತ್ತಾರೆ’ ಎಂದು ಆ ಸ್ಟೋರಿಯಲ್ಲಿ ಬರೆಯಲಾಗಿತ್ತು.
