Ashwaveega News 24×7 ಡಿಸೆಂಬರ್. 01: ಜಗತ್ತು ಆಧುನಿಕತೆಯತ್ತ ಸಾಗುತ್ತಿದಂತೆ, ದೇವಾಲಯಗಳಲ್ಲೂ ಬದಲಾವಣೆ ಶುರುವಾಗಿದೆ.. ಭಾರತದ ದೇವಾಲಯಗಳಲ್ಲಿ ಸಾಮಾನ್ಯವಾಗಿ ತೆಂಗಿನಕಾಯಿ, ಹಣ್ಣು, ಲಡ್ಡು, ಪೇಡಾ, ಪಾಯಸ ಇಲ್ಲ ಅಂದ್ರೆ ಊಟವನ್ನು ಪ್ರಸಾದವಾಗಿ ಕೊಡುತ್ತಾರೆ.
ಆದರೆ ಕೆಲವೆಡೆ ದೇವಿಯ ಮುಂದೆ ಪಿಜ್ಜಾ, ಸ್ಯಾಂಡ್ವಿಚ್, ಬರ್ಗರ್, ಪಾನಿಪುರಿ, ಕೋಲ್ಡ್ ಡ್ರಿಂಕ್ಗಳೇ ನೈವೇದ್ಯವಾಗಿ ಇರುತ್ತವೆ. ಇದು ವಿಚಿತ್ರವೆನಿಸುವಂತಹ ಅದ್ರೆ ಇದೂ ನಿಜ ಸಂಗತಿ.. ಈ ಸಂಪ್ರದಾಯ ಎರಡು ಪ್ರಸಿದ್ಧ ದೇವಾಲಯಗಳಲ್ಲಿ ದಶಕಗಳಿಂದ ನಡೆಯುತ್ತಿದೆ.
ಇದರ ಹಿಂದಿನ ಕಾರಣ ಮಾತ್ರ ತುಂಬಾ ಸಹಸ್ಯವಾಗಿದೆ, ಮಕ್ಕಳ ಪ್ರೀತಿ ಮತ್ತು ದೀರ್ಘಾಯುಷ್ಯಕ್ಕಾಗಿ ಈ ಹೊಸ ಸಂಪ್ರದಾಯ ಹುಟ್ಟಿಕೊಂಡಿದೆ. ಈ ಸುದ್ದಿ ಈ ಎಲ್ಲೆಡೆ ವೈರಲ್ ಆಗಿದೆ..
ಹೌದು ಗುಜರಾತ್ನ ರಾಜ್ಕೋಟ್ ಮತ್ತು ಚೆನ್ನೈ ಬಳಿಯ ದೇವಾಲಯಗಳಲ್ಲಿ ಮಕ್ಕಳು ಇಷ್ಟಪಡುವ ಪಿಜ್ಜಾ, ಬರ್ಗರ್, ಪಾನಿಪುರಿಯನ್ನು ಪ್ರಸಾದವಾಗಿ ನೀಡಲಾಗುತ್ತಿದೆ. ಸಾಂಪ್ರದಾಯಿಕ ಪ್ರಸಾದ ತಿನ್ನಲು ಮಕ್ಕಳು ನಿರಾಕರಿಸಿದಾಗ, ಅವರ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಈ ಹೊಸ ಸಂಪ್ರದಾಯ ಹುಟ್ಟಿಕೊಂಡಿದೆ.
ದೇವಾಲಯದಲ್ಲಿ ಸಾಮಾನ್ಯವಾಗಿ ಸಂಪ್ರಾದಾಯಿಕವಾಗಿ ತೆಂಗಿನಕಾಯಿ, ಲಡ್ಡು, ಪಾಯಸ ಅಥವಾ ಪುಳಿಯೋಗರೆಯನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಆದರೆ ಈ ದೇವಾಲಯದಲ್ಲಿ ಅದಕ್ಕೆ ವಿರುದ್ಧವಾಗಿದೆ. ಇದನ್ನು ಪ್ರಸಾದವಾಗಿ ನೀಡಲು ಒಂದು ಪ್ರಮುಖ ಕಾರಣವಿದೆ.
ಗುಜರಾತ್ನ ರಾಜ್ಕೋಟ್ ಜಿಲ್ಲೆಯ ರಪುತಾನಾ ಗ್ರಾಮದಲ್ಲಿ 65-70 ವರ್ಷಗಳ ಹಿಂದಿನ ಜೀವಿಕಾ ಮಾತಾಜಿ ದೇವಾಲಯದಲ್ಲಿ ಈ ವ್ಯವಸ್ಥೆಯನ್ನು ಮಾಡಲಾಗಿದೆ. ತಾಯಂದಿರು ತಮ್ಮ ಮಕ್ಕಳ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಈ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ.
ಈ ಹಿಂದೆ ದೇವಾಲಯದಲ್ಲಿ ತೆಂಗಿನಕಾಯಿ ಮತ್ತು ಸಕ್ಕರೆಯಿಂದ ಮಾಡಿದ ಸರಳ ಪ್ರಸಾದ ನೀಡಲಾಗುತ್ತಿತ್ತು. ಆದರೆ ದೇವಾಲಯಕ್ಕೆ ಬರುವ ಮಕ್ಕಳು ಈ ಪ್ರಸಾದವನ್ನ ತಿನ್ನಲು ಅದಕ್ಕಾಗಿ ಮಕ್ಕಳು ಸಂತೋಷದಿಂದ ದೇವಾಲಯಕ್ಕೆ ಬಂದು ಪ್ರಸಾದವನ್ನು ಸ್ವೀಕರಿಸುವಂತೆ ದೇವಾಲ ನಿರಾಕರಿಸುತ್ತಿದ್ದರು.
ಈ ಕಾರಣದಿಂದ ದೇವಾಸ್ಥಾನದ ಸಮಿತಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಮಕ್ಕಳು ಇಷ್ಟಪಡುವ ಪಿಜ್ಜಾ, ಬರ್ಗರ್, ಸ್ಯಾಂಡ್ವಿಚ್ ಮತ್ತು ಪಾನಿಪುರಿಯನ್ನು ಪ್ರಸಾದವಾಗಿ ನೀಡಲು ಆಡಳಿತ ಸಮಿತಿ ನಿರ್ಧರಿಸಿದೆ. ಈ ದೇವಾಲಯದಲ್ಲಿ ಭಕ್ತರೇ ಪ್ರಸಾದವನ್ನು ತಂದು ದೇವಿಗೆ ಅರ್ಪಿಸಿ, ನಂತರ ಅದನ್ನೇ ಮಕ್ಕಳಿಗೆ ನೀಡುತ್ತಾರೆ.
ಇನ್ನು ತಮಿಳುನಾಡಿನ ಚೆನ್ನೈ ಬಳಿಯ ಪಡಪ್ಪೈನಲ್ಲಿರುವ ಜೈ ದುರ್ಗಾ ಪೀಠಂ ದೇವಾಲಯದಲ್ಲೂ ಕೂಡ ಈ ಆಚರಣೆ ಇದೆ. ಈ ದೇವಾಲಯವನ್ನು ಹರ್ಬಲ್ ಆಂಕೊಲಾಜಿಸ್ಟ್ ಡಾ. ಕೆ. ಶ್ರೀಧರ್ ಸ್ಥಾಪಿಸಿದ್ದು, ಇಲ್ಲಿಯೂ ಸಹ, ಪಿಜ್ಜಾ, ಬರ್ಗರ್ಗಳು, ಸ್ಯಾಂಡ್ವಿಚ್ಗಳು, ಪಾನಿಪುರಿ ಮತ್ತು ತಂಪು ಪಾನೀಯಗಳನ್ನು ಸಾಮಾನ್ಯವಾಗಿ ದೇವಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ.
ಇದಲ್ಲದೆ, ಭಕ್ತರು ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ದೇವಾಲಯದಲ್ಲಿ ಆಚರಣೆ ಮಾಡಲು ರಶೀದಿ ಮಾಡಿಸಿಕೊಳ್ಳಬಹುದು. ಹಾಗೂ ಕೇಕ್ ಕಟ್ ಮಾಡಿ ಪ್ರಸಾದವಾಗಿ ನೀಡಬಹುದು. ಈ ದೇವಾಲಯದಲ್ಲಿರುವ ಎಲ್ಲಾ ಪ್ರಸಾದವನ್ನು ದೇವಾಲಯದ ಅಡುಗೆಮನೆಯಲ್ಲಿ ಸ್ವಚ್ಛತೆಯಿಂದ ತಯಾರಿಸಲಾಗುತ್ತದೆ.
