Ashwaveega News 24×7 ಡಿಸೆಂಬರ್. 01: ಇತ್ತಿಚೀನ ದಿನಗಳಲ್ಲಿ ಒಂದಲ್ಲ ಒಂದು ವಿಕೃತ ಘಟನೆಗಳು ನಡಿತ್ತಾನೆ ಇರುತ್ತೆ. ಎರಡೂ ಮೂರು ದಿನಗಳ ಹಿಂದೆ ಮಗಳೇ ತಾಯಿಗೆ ಚಪ್ಪಲಿಯಲ್ಲಿ ಹೊಡೆದ ಘಟನೆ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಫುಲ್ ಆಯ್ತು.
ಈಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.. ಹೌದು ತಾಯಿಯ ಮೇಲಿನ ದ್ವೇಷಕ್ಕೆ ರಾಕ್ಷಸಿ ರೂಪದ ಸಿಬ್ಬಂದಿ ಮುದ್ದು ಕಂದಮ್ಮನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಶಾಲಾ ಮಹಿಳಾ ಸಹಾಯಕ ಸಿಬ್ಬಂದಿಯೊಬ್ಬರು 4 ವರ್ಷದ ನರ್ಸರಿ ವಿದ್ಯಾರ್ಥಿಯನ್ನು ನೆಲಕ್ಕೆ ತಳ್ಳಿ ಹೊಡೆದು, ತುಳಿದು ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಹೈದರಾಬಾದಿನ ಶಾಲೆಯೊಂದರಲ್ಲಿ ನೆಡೆದಿದೆ.
ಶಾಲೆ ಸಿಬ್ಬಂದಿಯೊಬ್ಬರು ಮಗುವನ್ನು ಕ್ರೂರವಾಗಿ ಥಳಿಸಿ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಆರೋಪಿಯನ್ನು ಲಕ್ಷ್ಮಿ ಎಂದು ಗುರುತಿಸಲಾಗಿದೆ.
ಜೀಡಿಮೆಟ್ಲಾದ ಶಾಪುರ್ ನಗರದ ಶಾಲೆಯೊಂದರಲ್ಲಿ ಶನಿವಾರ ಮಗುವನ್ನು ಆರೋಪಿ ಲಕ್ಷ್ಮಿ ಶೌಚಾಲಯಕ್ಕೆ ಕರೆದುಕೊಂಡು ಹೋದಾಗ ಈ ಘಟನೆ ನಡೆದಿದೆ. ದೂರಿನ ಪ್ರಕಾರ ಶಾಲಾ ಸಿಬ್ಬಂದಿ ಮಗುವಿನ ಮೇಲೆ ಪದೇ ಪದೇ ಹಲ್ಲ ನಡೆಸಿ , ನಂತರ ಮಗುವನ್ನು ಕಾಲಿನಿಂದ ತುಳಿದು ಕೊಲೆ ಮಾಡಿದ್ದಾರೆ.
ಈ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ನೆಲಕ್ಕೆ ತಳ್ಳಿ, ತಲೆಗೆ ಹೊಡೆದು, ಕತ್ತು ಹಿಸುಕಿ ಕೊಂದಿದ್ದಾಳೆ.
ಶಾಲಾ ಮುಗಿದ ನಂತರ ಅದೇ ಶಾಲೆಯಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿರುವ ಮಗುವಿನ ತಾಯಿ ಮಕ್ಕಳನ್ನು ಬಿಡಲು ಹೋದಾಗ ಈ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಸಮಯದಲ್ಲಿ ಆಕೆಯ ಮಗಳು ಶಾಲೆಯ ಆವರಣದೊಳಗೆ ಇದ್ದಳು.. ಜೀಡಿಮೆಟ್ಲಾ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾರ, ಮಗುವಿನ ತಾಯಿ ಹಾಗೂ ಈ ಸಿಬ್ಬಂದಿ ನಡುವೆ ದ್ವೇಷ ಇರಬಹುದು ಎಂದು ಹೇಳಲಾಗುತ್ತಿದೆ.
ಈ ಬಾಲಕಿಯ ತಾಯಿ ತನ್ನ ಕೆಲಸವನ್ನು ಕಸಿದುಕೊಳ್ಳಬಹುದು ಎನ್ನುವ ಭಯ ಆಕೆಗೆ ಇದ್ದು ಈ ಕೊಲೆ ಮಾಡಿದ್ದಾಳೆಂದು ಹೇಳಲಾಗಿದೆ.. ಮಗುವಿನ ಪೋಷಕರು ನೀಡಿದ ದೂರಿನ ಮೇರೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ಆರೋಪಿ ಲಕ್ಷ್ಮಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಘಟನೆಯಿಂದಾಗಿ ಪೋಷಕರಲ್ಲಿ ಶಾಲೆಯೊಳಗೆ ಮಕ್ಕಳ ಸುರಕ್ಷತೆ ಬಗ್ಗೆ ತೀವ್ರ ಆತಂಕ ಹುಟ್ಟುಹಾಕಿದೆ.
