Ashwaveega News 24×7 ಜನವರಿ 16 – ಬೆಂಗಳೂರು: ಸಾಮಾನ್ಯ ಅರಿಶಿನಕ್ಕಿಂತ ಅಪರೂಪದ ಹಾಗೂ ಹೆಚ್ಚು ಮೌಲ್ಯ ಹೊಂದಿರುವ ಕಪ್ಪು ಅರಿಶಿನ (Black Turmeric) ಇದೀಗ ರೈತರ ಗಮನ ಸೆಳೆಯುತ್ತಿದೆ.
ಆಯುರ್ವೇದ ಔಷಧಗಳಲ್ಲಿ ಹೆಚ್ಚಿದ ಬಳಕೆಯಿಂದಾಗಿ ಕಪ್ಪು ಅರಿಶಿನಕ್ಕೆ ದೇಶಿ–ವಿದೇಶಿ ಮಾರುಕಟ್ಟೆಗಳಲ್ಲಿ ಭಾರೀ ಬೇಡಿಕೆ ನಿರ್ಮಾಣವಾಗಿದೆ. ಸರಿಯಾದ ತಂತ್ರಜ್ಞಾನ ಹಾಗೂ ಮಾರುಕಟ್ಟೆ ಸಂಪರ್ಕ ಇದ್ದರೆ, ಒಂದು ಎಕರೆ ಭೂಮಿಯಲ್ಲಿ ಲಕ್ಷಾಂತರ ರೂಪಾಯಿ ಲಾಭ ಗಳಿಸುವ ಅವಕಾಶ ಇದೆ ಅಂತ ಕೃಷಿ ತಜ್ಞರು ಹೇಳುತ್ತಾರೆ ..
ಕಪ್ಪು–ನೀಲಿ ಬಣ್ಣದ ಗಡ್ಡೆ ಹೊಂದಿರುವ ಈ ಅರಿಶಿನ ಔಷಧೀಯ ಗುಣಗಳಿಂದ ಪ್ರಸಿದ್ಧವಾಗಿದೆ . ಸಂಧಿವಾತ, ಚರ್ಮರೋಗ, ಉಸಿರಾಟದ ಸಮಸ್ಯೆ ಸೇರಿದಂತೆ ಹಲವು ಕಾಯಿಲೆಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಇದೇ ಕಾರಣಕ್ಕೆ ಇದರ ಬೆಲೆ ಸಾಮಾನ್ಯ ಅರಿಶಿನಕ್ಕಿಂತ ಹಲವು ಪಟ್ಟು ಹೆಚ್ಚಾಗಿದೆ.
ಒಟ್ಟಿನಲ್ಲಿ, ಸಾಂಪ್ರದಾಯಿಕ ಬೆಳೆಗಳಿಂದ ದೂರ ಸರಿದು, ಮೌಲ್ಯಯುತ ಔಷಧೀಯ ಸಸ್ಯಗಳತ್ತ ಮುಖ ಮಾಡಿದರೆ, ಕಪ್ಪು ಅರಿಶಿನ ರೈತರ ಜೀವನಕ್ಕೆ ಸುವರ್ಣಾವಕಾಶವಾಗಿ ಪರಿಣಮಿಸುವುದು ಖಚಿತ.
