Ashwaveega News 24×7 ನವೆಂಬರ್. 29: ವಿಠಲ್ ಮಲ್ಯ ರಸ್ತೆಯಲ್ಲಿರುವ ಸೇಂಟ್ ಜೋಸೆಸ್ಟ್ ಸಿಬಿಎಸ್ಇ ಶಾಲೆಯಲ್ಲಿ ಇಂದು ‘ಸೈ ಪ್ಲೋರ್’ ಎಂಬ ಶೀರ್ಷಿಕೆ ಅಡಿಯಲ್ಲಿ ವಾರ್ಷಿಕ ವಿಜ್ಞಾನ ವಸ್ತು ಕಲಾ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
‘ಗ್ಯಾಸ್ ಟರ್ಬೆನ್ ಸಂಶೋಧನಾ ಸಂಸ್ಥೆ ಮತ್ತು ‘ವಿಜ್ಞಾನಿ -ಜಿ ಗ್ರೂಪ್ನ ನಿರ್ದೇಶಕರಾದ ಶ್ರೀ ವಿದ್ಯಾದೀಶ್ ಪಾಂಡುರಂಗಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದರು.

ಇನ್ನೂ ಶಾಲೆಯ ಪ್ರಾಂಶುಪಾಲರಾದ ರೆವರೆಂಟ್ ಫಾದರ್ ಮೆಲ್ವಿನ್ ಅನಿಲ್ ಲೋಬೋ ಮಾತಾನಾಡಿ ಪ್ರತಿ ವರ್ಷದಂತೆ ಈ ವರ್ಷ ಕೂಡ ನಮ್ಮ ಶಾಲೆಯಲ್ಲಿ ಕಲಾ ಪ್ರದರ್ಶನ ಏರ್ಪಡಿಸಿದ್ದು.ವಿದ್ಯಾರ್ಥಿಗಳು ವಿವಿಧ ಅವಿಷ್ಕರ ಮಾಡಿ ಪ್ರದರ್ಶನಕ್ಕೆ ಇಡಲಾಗಿದೆ.

ಈ ಪ್ರದರ್ಶನದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಸೌರಮಂಡಲ, ಸಾವಯವ ಕೃಷಿ, ಆಧುನಿಕ ಬೇಸಾಯ, ನೈಸರ್ಗಿಕ ವಸ್ತುಗಳ ಬಳಕೆ, ರಾಕೆಟ್, ಚಂದ್ರಯಾನ, ತ್ಯಾಜ್ಯ ವಸ್ತುಗಳ ನಿರ್ವಹಣೆ, ಪ್ರಕೃತಿ ವಿಸ್ಮಯ ಮತ್ತು ರಾಸಾಯನಿಕ ಪ್ರಯೋಗಗಳನ್ನು ವಿವರಣೆಯ ಮೂಲಕ ವಿವರಿಸಿದರು. ಈಕಾರ್ಯಕ್ರಮ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ರು..

ಇನ್ನೂ..ವಿದ್ಯಾರ್ಥಿಗಳು ವಿಜ್ಞಾನ ಅನ್ವೇಷಣೆಯನ್ನು ಗುರುತಿಸಿ ಯುವ ವಿಜ್ಞಾನಿಗಳನ್ನು ಪ್ರೋತ್ಸಾಹಿಸಲು ಈ ವಿಜ್ಞಾನ ವಸ್ತು ಕಲಾ ಪ್ರದರ್ಶನವು ಉತ್ತಮ ಅವಕಾಶವನ್ನು ನೀಡಿದೆ, ಶಾಲೆಯು ಪ್ರತಿವರ್ಷ ಈ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದು, ಶೈಕ್ಷಣಿಕತೆಯು ಕೇವಲ ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತವಾಗಿರದೆ, ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬುದ್ಧಿವಂತಿಕೆಗೆ ಸಹಾಯವಾಗುತ್ತೆ ಅಂತ ವಿಜ್ಞಾನಿ ಜಿ ಗ್ರುಪ್ ನ ನಿರ್ದೇಶಕ ವಿದ್ಯಾಧೀಶ್ ಪಾಂಡುರಂಗಿ ತಿಳಿದಿದ್ರು.

