Ashwaveega News 24×7 ಫೆಬ್ರವರಿ 20 – 2026 ಬೆಂಗಳೂರು : ಐಟಿ ಲೋಕದಲ್ಲಿ ಕೃತಕ ಬುದ್ಧಿಮತ್ತೆ (AI) ದರ್ಬಾರ್ ಸೃಷ್ಟಿಸಿರುವ ಸಂಚಲನದ ನಡುವೆ, ‘ಬಾಬಾ ವಂಗಾ’ ಹೆಸರಿನಲ್ಲಿ ಹರಿದಾಡುತ್ತಿರುವ ಭವಿಷ್ಯವಾಣಿ ಮತ್ತೆ ಚರ್ಚೆಗೆ ಕಾರಣವಾಗಿದೆ. ಎಐ ಅಬ್ಬರದಿಂದ ಉದ್ಯೋಗ ಕ್ಷೇತ್ರದಲ್ಲಿ ಭಾರೀ ಬದಲಾವಣೆ ಸಂಭವಿಸಲಿದೆ ಎಂಬ ಮಾತು ಟೆಕ್ ವಲಯದಲ್ಲಿ ಆತಂಕ ಹುಟ್ಟಿಸಿದೆ.
ಬಲ್ಗೇರಿಯಾದ ಪ್ರಸಿದ್ಧ ಮಿಸ್ಟಿಕ್ Baba Vanga ಅವರು ಭವಿಷ್ಯದಲ್ಲಿ ಹೊಸ ತಂತ್ರಜ್ಞಾನ ಮನುಷ್ಯನ ಬದುಕಿನ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರೆಂಬ ಹೇಳಿಕೆಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 2026ರ ವೇಳೆಗೆ ಕೃತಕ ಬುದ್ಧಿಮತ್ತೆ ವ್ಯಾಪಕವಾಗಿ ಉದ್ಯೋಗ ಮಾರುಕಟ್ಟೆಯನ್ನು ಬದಲಾಯಿಸಬಹುದು ಎಂಬ ಅಂದಾಜುಗಳು ಹರಿದಾಡುತ್ತಿವೆ …
ಇತ್ತ ಜಗತ್ತಿನಾದ್ಯಂತ ಹಲವು ದಿಗ್ಗಜ ಐಟಿ ಕಂಪನಿಗಳಲ್ಲಿ ಲೇಆಫ್ ಪರ್ವ ನಡೆಯುತ್ತಿರುವ ಹಿನ್ನೆಲೆ, ಎಐ ಕಾರಣದಿಂದ ಉದ್ಯೋಗ ಕಳೆದುಕೊಳ್ಳುವ ಭೀತಿ ಉದ್ಯೋಗಿಗಳಲ್ಲಿ ಹೆಚ್ಚಾಗಿದೆ. ಕೆಲವು ಕ್ಷೇತ್ರಗಳಲ್ಲಿ ಆಟೊಮೇಶನ್ ಮತ್ತು ಜನರೇಟಿವ್ ಎಐ ಬಳಕೆ ಹೆಚ್ಚಾಗುತ್ತಿರುವುದು ನಿಜವಾದರೂ, ತಜ್ಞರ ಪ್ರಕಾರ ಇದು ಸಂಪೂರ್ಣ ಉದ್ಯೋಗ ನಾಶವಲ್ಲ; ಬದಲಿಗೆ ಕೌಶಲ್ಯ ಪರಿವರ್ತನೆಯ ಅಗತ್ಯವಿದೆ.
ಎಐ ಅಬ್ಬರದ ಮುಂದೆ ಕೆಲವು ಸಾಂಪ್ರದಾಯಿಕ ಕೆಲಸಗಳಿಗೆ ಕತ್ತರಿ ಬೀಳಬಹುದು. ಆದರೆ ಹೊಸ ತಂತ್ರಜ್ಞಾನಗಳೊಂದಿಗೆ ಹೊಸ ಉದ್ಯೋಗಾವಕಾಶಗಳೂ ಹುಟ್ಟಿಕೊಳ್ಳುತ್ತವೆ ಎಂಬುದು ತಂತ್ರಜ್ಞರ ಅಭಿಪ್ರಾಯ.
ಒಟ್ಟಾರೆ, ಎಐ ಭವಿಷ್ಯ ಕುರಿತು ಆತಂಕ ಮತ್ತು ಆಸಕ್ತಿ ಎರಡೂ ಹೆಚ್ಚುತ್ತಿರುವ ಈ ಸಂದರ್ಭ, ಕೌಶಲ್ಯಾಭಿವೃದ್ಧಿ ಮತ್ತು ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯವೇ ಮುಂದಿನ ದಿನಗಳಲ್ಲಿ ಮುಖ್ಯಯಾಗುತ್ತೆ …
