Ashwaveega News 24×7 ಫೆಬ್ರವರಿ 20 – 2026 : ಸ್ಯಾಂಡಲ್ವುಡ್ ನಟ Yash ಅಭಿನಯದ ಬಹು ನಿರೀಕ್ಷಿತ ಸಿನಿಮಾ Toxic ಟೀಸರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. 1 ನಿಮಿಷ 55 ಸೆಕೆಂಡ್ ಅವಧಿಯ ಈ ಟೀಸರ್ನಲ್ಲಿ ಬರೀ ವೈಲೆನ್ಸ್, ಕ್ರೈಂ ಮತ್ತು ರಕ್ತಸಿಕ್ತ ದೃಶ್ಯಗಳೇ ಹೆಚ್ಚಾಗಿ ಕಾಣಿಸುತ್ತಿವೆ.
ಕ್ಲೀನ್ ಶೇವ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಯಶ್, ‘ವೈಲೆಂಟ್ ರಾಯ’ ಆಗಿ ಭರ್ಜರಿ ಎಂಟ್ರಿ ಕೊಡುತ್ತಾರೆ. “ಡ್ಯಾಡ್ ಇಸ್ ಹೋಮ್” ಎಂದು ಘರ್ಜಿಸುವ ಸನ್ನಿವೇಶ ಅಭಿಮಾನಿಗಳಲ್ಲಿ ರೋಮಾಂಚ ಹುಟ್ಟಿಸಿದೆ. “ಈ ಸಲ ಯುದ್ಧನೇ ಬೇರೆ” ಎಂಬ ಡೈಲಾಗ್ ಮೂಲಕ ವಿಭಿನ್ನ ಹೋರಾಟದ ಸೂಚನೆ ನೀಡಿದ್ದಾರೆ.
ಟೀಸರ್ನಲ್ಲಿ ಅಶ್ಲೀಲ ಅಥವಾ ಮುಜುಗರದ ದೃಶ್ಯಗಳನ್ನು ತಪ್ಪಿಸಿದರೂ, ಕ್ರೈಂ ವಿಜೃಂಭಣೆ ಮತ್ತು ರಕ್ತಪಾತದ ದೃಶ್ಯಗಳು ಗಮನಸೆಳೆಯುತ್ತವೆ. ಕೆಲವೆಡೆ ಕೊಳಕು ಮಾತುಗಳ ಬಳಕೆ ಕೂಡ ಕೇಳಿಬರುತ್ತದೆ. “ವಿರೋಧ ಕಟ್ಕೊಂಡು ಬದುಕಲಾರೆ… ಹಠ ಬಿಡು” ಎಂಬ ಪವರ್ಫುಲ್ ಡೈಲಾಗ್ ಹೊಡೆದಿರುವ ಯಶ್, ಮತ್ತೊಮ್ಮೆ ಮಾಸ್ ಆಕ್ಷನ್ ಹೀರೋ ಆಗಿ ಮೆರೆದಿದ್ದಾರೆ.
ಬ್ಲಡ್-ಮರ್ಡರ್ ದೃಶ್ಯಗಳ ಮೂಲಕ ರಕ್ತಸಾಗರ ಹರಿಸಿದಂತೆ ತೋರಿಸಿರುವ ಟೀಸರ್, ಅಭಿಮಾನಿಗಳಿಗೆ ಥ್ರಿಲ್ ನೀಡಿದರೆ, ಕೆಲವುವರಲ್ಲಿ ಟಾಕ್ಸಿಕ್ ಹಿಂಸಾಚಾರ ಕುರಿತು ಚರ್ಚೆಗೂ ಕಾರಣವಾಗಿದೆ.
ಒಟ್ಟಾರೆ, ‘ಟಾಕ್ಸಿಕ್’ ಟೀಸರ್ ಸಖತ್ ವೈಲೆಂಟ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯನ್ ವ್ಯೂಸ್ ಪಡೆದು ಟ್ರೆಂಡ್ ಆಗುತ್ತಿದೆ. ಸಿನಿಮಾ ಯಾವ ಮಟ್ಟದ ಯುದ್ಧವನ್ನು ತೆರೆಗೆ ತರುತ್ತದೆ ಎಂಬ ಕುತೂಹಲ ಇದೀಗ ಮತ್ತಷ್ಟು ಹೆಚ್ಚಿದೆ.
