Ashwaveega News 24×7 ಮೇ 04 – 2026 : ದಾವಣಗೆರೆ : ರಾಜ್ಯದ ಗಮನ ಸೆಳೆದಿರುವ ದಾವಣಗೆರೆ ಬೈಎಲೆಕ್ಷನ್ ಫಲಿತಾಂಶದತ್ತ ಎಲ್ಲರ ಕಣ್ಣು ನೆಟ್ಟಿದೆ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ರಾಜಕೀಯ ಉತ್ತರಾಧಿಕಾರಿ ಯಾರು ಎಂಬ ಕುತೂಹಲ ತೀವ್ರಗೊಂಡಿದೆ.
ಈ ಬಾರಿ ಪ್ರಮುಖ ಪೈಪೋಟಿ ಸಮರ್ಥ್ ಎಸ್.ಎಂ. ಮತ್ತು ಶ್ರೀನಿವಾಸ ದಾಸಕರಿಯಪ್ಪ ನಡುವೆ ನಡೆಯುತ್ತಿದ್ದು, ಯಾರಿಗೆ ಗೆಲುವಿನ ಮಾಲೆ ಸಿಗಲಿದೆ ಅಂತ ಕಾದು ನೋಡಬೇಕಾಗಿದೆ …
ಒಟ್ಟು 1,58,404 ಮತದಾರರು ತಮ್ಮ ಮತದಾನ ಹಕ್ಕು ಚಲಾಯಿಸಿದ್ದು, ಅವರ ತೀರ್ಪು ಶೀಘ್ರದಲ್ಲೇ ಬಹಿರಂಗವಾಗಲಿದೆ. ಮತ ಎಣಿಕೆಗೆ ದಾವಣಗೆರೆಯ ಡಿಆರ್ಆರ್ ಕಾಲೇಜಿನಲ್ಲಿ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ.
ಈ ಚುನಾವಣೆಯು ಹೈವೋಲ್ಟೇಜ್ “ದಂಗಲ್” ಆಗಿ ಪರಿಣಮಿಸಿದ್ದು, ವಿವಿಧ ರಾಜಕೀಯ ಲೆಕ್ಕಾಚಾರಗಳು ಕುತೂಹಲ ಹುಟ್ಟಿಸಿವೆ.
ದಾವಣಗೆರೆಯಲ್ಲಿ ಕಾಂಗ್ರೆಸ್ಗೆ ಇರುವ ಪ್ಲಸ್ ಮತ್ತು ಮೈನಸ್ ಅಂಶಗಳು, ಹಾಗೆಯೇ ಬಿಜೆಪಿಗೆ ಅನುಕೂಲ-ಪ್ರತಿಕೂಲ ಪರಿಸ್ಥಿತಿಗಳು ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.
ಲಿಂಗಾಯತ ಸಮುದಾಯದ ಒಗ್ಗಟ್ಟು ಕಾಂಗ್ರೆಸ್ಗೆ ವರವಾಗುತ್ತದೆಯೇ? ಮುಸ್ಲಿಂ ಮತಗಳ ವಿಭಜನೆ ಬಿಜೆಪಿಗೆ ಲಾಭವಾಗುತ್ತದೆಯೇ? ಎಂಬ ಪ್ರಶ್ನೆಗಳು ಪ್ರಮುಖವಾಗಿವೆ.
ಈ ಬಾರಿ 68.55% ಮತದಾನ ದಾಖಲಾಗಿದ್ದು, ಇದು ಯಾರ ಪಾಲಿಗೆ ಅನುಕೂಲವಾಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಒಟ್ಟು ಮತದಾರರಲ್ಲಿ 78,437 ಪುರುಷರು ಹಾಗೂ 79,949 ಮಹಿಳೆಯರು ಮತ ಚಲಾಯಿಸಿದ್ದಾರೆ.
