Ashwaveega News 24×7 ಫೆಬ್ರವರಿ 22 – 2026 ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ Bairathi Basavaraj ವಿರುದ್ಧ ಸಿಐಡಿ ತನಿಖೆ ಗಟ್ಟಿಗೊಂಡಿದೆ. ಸಿಐಡಿ ಕಸ್ಟಡಿಯಲ್ಲಿ ನಡೆದ ವಿಚಾರಣೆ ವೇಳೆ ಬರೋಬ್ಬರಿ 258 ಪ್ರಶ್ನೆಗಳು ಸಿದ್ಧಪಡಿಸಲಾಗಿದ್ದು, ಅವುಗಳಲ್ಲಿ ಪ್ರಶ್ನೆಗಳಿಗೆ ಬೈರತಿ ಬಸವರಾಜ್ ಉತ್ತರ ನೀಡಿರುವ ಮಾಹಿತಿ ಲಭ್ಯವಾಗಿದೆ.
ಮೂಲಗಳ ಪ್ರಕಾರ, ಬಹುತೇಕ ಪ್ರಶ್ನೆಗಳಿಗೆ ‘ಯೆಸ್’, ‘ನೋ’ ಅಥವಾ ‘ನೆನಪಿಲ್ಲ’ ಎಂಬ ಸಂಕ್ಷಿಪ್ತ ಉತ್ತರಗಳನ್ನೇ ನೀಡಿದ್ದಾರೆ ಅಂತೆ. ಕೆಲ ಪ್ರಶ್ನೆಗಳಿಗೆ ಗೊಂದಲಕಾರಿ ಉತ್ತರ ನೀಡಿದರೆಂಬ ಆರೋಪವೂ ಕೇಳಿಬಂದಿದೆ . ವಿಶೇಷವಾಗಿ , ಮೊದಲು ನೀಡಿದ್ದ ಹೇಳಿಕೆಗಳಿಗೂ ಈಗಿನ ಹೇಳಿಕೆಗಳಿಗೂ ತಾಳೆ ಕಾಣದಿರುವುದು ತನಿಖಾ ಅಧಿಕಾರಿಗಳ ಗಮನ ಸೆಳೆದಿದೆ .
ಒಂದಕ್ಕೊಂದು ವಿರುದ್ಧವಾಗಿರುವ ಹೇಳಿಕೆಗಳು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿವೆ. ಎ1 ಜಗದೀಶ್ ಹಾಗೂ ಎ20 ಅಜಿತ್ ಜೊತೆಗಿನ ಸಂಪರ್ಕದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಕ್ಕಿಲ್ಲವೆಂಬ ಮಾಹಿತಿ ಲಭ್ಯವಾಗಿದೆ. ಈ ಅಂಶಗಳನ್ನೆಲ್ಲ ಸಿಐಡಿ ಅಧಿಕಾರಿಗಳು ದಾಖಲೆಗಳೊಂದಿಗೆ ಹೋಲಿಕೆ ಮಾಡಿ ಪರಿಶೀಲಿಸುತ್ತಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ಕಾಲ್ ಡೇಟಾ, ಡಿಜಿಟಲ್ ಸಾಕ್ಷ್ಯಗಳು ಹಾಗೂ ಹಿಂದಿನ ಹೇಳಿಕೆಗಳನ್ನು ಆಧರಿಸಿ ಪ್ರಶ್ನೆಗಳು ಕೇಳಲಾಗಿದೆ . ನೀಡಿದ ಪ್ರತಿಯೊಂದು ಉತ್ತರದ ವಿಶ್ವಾಸಾರ್ಹತೆಯನ್ನು ಸಿಐಡಿ ಪರಿಶೀಲಿಸುತ್ತಿದ್ದು, ಮುಂದಿನ ಕಾನೂನು ಕ್ರಮಗಳ ಬಗ್ಗೆ ಚರ್ಚೆಗಳು ಜೋರಾಗಿವೆ.
ರಾಜಕೀಯ ವಲಯದಲ್ಲಿ ಈ ಬೆಳವಣಿಗೆ ತೀವ್ರ ಚರ್ಚೆಗೆ ಕಾರಣವಾಗಿದೆ . ಪ್ರಕರಣದ ಅಂತಿಮ ದಿಕ್ಕು ಸಿಐಡಿ ವರದಿ ಹಾಗೂ ನ್ಯಾಯಾಲಯದ ಮುಂದಿನ ಆದೇಶಗಳ ಮೇಲೆ ಅವಲಂಬಿತವಾಗಿದೆ….
