Ashwaveega News 24×7 ಫೆಬ್ರವರಿ 22 – 2026 ಬೆಂಗಳೂರು : ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವದ ಚರ್ಚೆ ಮತ್ತೆ ಜೋರಾಗಿದೆ . ಉಪಮುಖ್ಯಮಂತ್ರಿ D. K. Shivakumar ಅವರ ದಿಲ್ಲಿ ಪ್ರವಾಸದ ಬೆನ್ನಲ್ಲೇ ಸಿಎಂ ಬಣ ಫುಲ್ ಆಕ್ಟೀವ್ ಆಗಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ . ಇದೇ ಸಂದರ್ಭದಲ್ಲಿ ಸಿಎಂ ಪರ ಎಂದು ಗುರುತಿಸಲ್ಪಡುವ Satish Jarkiholi ಹಾಗೂ K. N. Rajanna ದಿಢೀರ್ ಹೈಕಮಾಂಡ್ ಭೇಟಿಯಾದ ಸುದ್ದಿ ಚರ್ಚೆ ಶುರುವಾಗಿದೆ .
ಇಬ್ಬರು ನಾಯಕರು ಒಟ್ಟಿಗೆ ವರಿಷ್ಠರನ್ನು ಭೇಟಿ ಮಾಡಿದ್ದೇಕೆ ? ಎಲ್ಲವೂ ಫೈನಲ್ ಹಂತಕ್ಕೆ ಬಂದಿದೆ ಎಂದು ಹೇಳುತ್ತಿರುವ ನಾಯಕರ ಮಾತಿನ ಅರ್ಥವೇನು ? ಸಂಕ್ರಾಂತಿಗೆ ನಿರೀಕ್ಷಿಸಿದ್ದ ಬೆಳವಣಿಗೆಗಳು ಆಗದ ಹಿನ್ನೆಲೆಯಲ್ಲಿ ಈಗ ಯುಗಾದಿ ಟಾರ್ಗೆಟ್ ಆಗಿದೆಯೇ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಯುಗಾದಿಯ ಸಿಹಿ ಯಾರಿಗೆ ? ಕಹಿ ಯಾರಿಗೆ ? ಯುಗಾದಿ ಬಳಿಕ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸಬಹುದೇ ? ಬಜೆಟ್ ನಂತರ ನಾಯಕತ್ವದ ವಿಚಾರದಲ್ಲಿ ಸ್ಪಷ್ಟತೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಡಿಕೆಶಿ ಬಣ ಕಾದು ಕುಳಿತಿದೆ …
ಈ ನಡುವೆ ಸಿಎಂ ನಿಂದಲೂ ಕುತೂಹಲ ಕೆರಳಿಸುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದಕ್ಕೆ ವಿವಿಧ ಅರ್ಥಗಳನ್ನು ನೀಡಲಾಗುತ್ತಿದೆ. ಇದೇ ತಿಂಗಳಲ್ಲಿ ಸಿಎಂ ಹಾಗೂ ಡಿಸಿಎಂಗೆ ಹೈಕಮಾಂಡ್ ಬುಲಾವ್ ಸಾಧ್ಯತೆ ಇದೆ ಅಂತೆ .
ಒಟ್ಟಾರೆ, ಕಾಂಗ್ರೆಸ್ನೊಳಗಿನ ನಾಯಕತ್ವ ಜಟಾಪಟಿ ಹೊಸ ಹಂತಕ್ಕೆ ತಲುಪಿದ್ದು, ಮುಂದಿನ ಕೆಲವು ವಾರಗಳು ರಾಜ್ಯ ರಾಜಕಾರಣದ ದಿಕ್ಕನ್ನು ನಿರ್ಧರಿಸುವ ಸಾಧ್ಯತೆ ಇದೆ.
