Ashwaveega News 24×7 ಫೆಬ್ರವರಿ 2026 – ನವದೆಹಲಿ : ಸಿಗರೇಟ್ ಸೇದುವವರಿಗೆ ಕೇಂದ್ರ ಬಜೆಟ್ ದೊಡ್ಡ ಹೊಡೆತ ನೀಡಿದೆ. ಇನ್ಮುಂದೆ ಧೂಮಪಾನ ಕೇವಲ ಆರೋಗ್ಯವನ್ನಷ್ಟೇ ಅಲ್ಲ, ಜೇಬನ್ನೂ ಸುಡುವಂತಾಗಿದೆ. ಸಿಗರೇಟ್ಗಳ ಮೇಲೆ ಶೇಕಡಾ 40ರಷ್ಟು ಜಿಎಸ್ಟಿ ವಿಧಿಸಲಾಗಿದ್ದು, ಇದರ ಪರಿಣಾಮವಾಗಿ ಸಿಗರೇಟ್ ಬೆಲೆಗಳು ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ.
ಬಜೆಟ್ ಘೋಷಣೆಯ ಬೆನ್ನಲ್ಲೇ, ಗುಟ್ಕಾ ಹಾಗೂ ಸಿಗರೇಟ್ಗಳ ಬೆಲೆ ಇಂದು ಸಿಗರೇಟ್ ದುಬಾರಿಯಾಗುವ ಸೂಚನೆಗಳು ದೊರೆತಿವೆ. ಧೂಮಪಾನ ಪ್ರಿಯರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬರೆ ಎಳೆದಂತಾಗಿದೆ ಎಂಬ ಚರ್ಚೆ ಶುರುವಾಗಿದೆ.
ಕಿಂಗ್ ಸಿಗರೇಟ್ ಬೆಲೆ ಸಿಗರೇಟಿಗೆ ರೂ. 8.50ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಇದೇ ರೀತಿ ಕಿಂಗ್ ಹಾಗೂ ಲೈಟ್ಸ್ ಸಿಗರೇಟ್ಗಳು ಸಿಕ್ಕಾಪಟ್ಟೆ ಕಾಸ್ಟ್ಲಿಯಾಗಲಿವೆ. 84 ಎಂಎಂ ಕ್ಯಾಟಗರಿಗೆ ಒಳಪಡುವ ಕಿಂಗ್ ಸಿಗರೇಟ್ಗಳ ಮೇಲಿನ ತೆರಿಗೆ ಹೆಚ್ಚಳದಿಂದ ಗ್ರಾಹಕರಿಗೆ ನೇರ ಹೊರೆ ಬೀಳಲಿದೆ. ಸ್ಮಾಲ್ ಸಿಗರೇಟ್ಗಳ ಬೆಲೆಯೂ ಕೂಡ ಸುಮಾರು ರೂ. 3ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಒಟ್ಟಿನಲ್ಲಿ, ಇನ್ಮುಂದೆ ಸಿಗರೇಟ್ ಸೇದುವವರು ಎದೆ ಗಟ್ಟಿ ಮಾಡಿಕೊಳ್ಳಬೇಕಾದ ಸ್ಥಿತಿ ಬಂದಿದೆ. ಯಾಕಂದ್ರೆ ಇನ್ಮುಂದೆ ಸುಡುವುದು ನಿಮ್ಮ ಬಾಯಷ್ಟೇ ಅಲ್ಲ…ನಿಮ್ಮ ಜೇಬೂ ಕೂಡ !
