Ashwaveega News 24×7 ಡಿಸೆಂಬರ್. 02:ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ಇದೇ ಡಿಸೆಂಬರ್ 11 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ. ಇದೀಗ ಈ ಸಿನಿಮಾದ ಟ್ರೈಲರ್ ರಿಲೀಸ್ಗೆ ದಿನಾಂಕ ನಿಗದಿಯಾಗಿದೆ.
ಇದೇ ಡಿಸೆಂಬರ್ 5ರಂದು ಬೆಳಗ್ಗೆ 10:05ಕ್ಕೆ ಡೆವಿಲ್ ಟ್ರೈಲರ್ ರಿಲೀಸ್ ಆಗಲಿದೆ. ಇದರ ಅನೌನ್ಸ್ಮೆಂಟ್ ವಿಭಿನ್ನವಾಗಿ ಮಾಡಿದೆ ಚಿತ್ರತಂಡ. ದರ್ಶನ್ ಅವರ ಧ್ವನಿಯಲ್ಲಿ ʼನಾನ್ ಬರ್ತಿದ್ದೀನಿ ಚಿನ್ನʼ ಅಂತ ಟ್ರೈಲರ್ ರಿಲೀಸ್ ದಿನಾಂಕ ಅನೌನ್ಸ್ ಮಾಡಿರೋದು ದರ್ಶನ್ ಫ್ಯಾನ್ಸ್ಗೆ ಮತ್ತಷ್ಟು ಖುಷಿಕೊಟ್ಟಿದೆ.
ಈಗಾಗಲೇ ಡೆವಿಲ್ ಸಿನಿಮಾದ ಎರಡು ಹಾಡುಗಳು ರಿಲೀಸ್ ಆಗಿದ್ದು, ಟ್ರೈಲರ್ಗಾಗಿ ದರ್ಶನ್ ಫ್ಯಾನ್ಸ್ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.
ಇನ್ನು ಇಂದು ದರ್ಶನ್ ಅನುಪಸ್ಥಿತಿ ಹಿನ್ನೆಲೆಯಲ್ಲಿ, ಚಿತ್ರದ ಪ್ರಚಾರವನ್ನು ತಂಡವೇ ಮುಂದುವರೆಸುತ್ತಿದೆ. ಈ ವೇಳೆ ವೇದಿಕೆಯ ಮೇಲಿದ್ದ ನಟ ಹುಲಿ ಕಾರ್ತಿಕ್, ದರ್ಶನ್ ಅವರ ಇತ್ತೀಚಿನ ಸ್ಥಿತಿಯನ್ನು ಸ್ಮರಿಸಿ ಕಣ್ಣೀರಿಟ್ಟರು.
ನಿರ್ದೇಶಕ ನಿರ್ಮಾಪಕ ಪ್ರಕಾಶ್ ವೀರ್ ಹೇಳಿಕೆ, ದರ್ಶನ್ ಬರ್ತಾರೆ ಅಂತ ಇಷ್ಟು ದಿನ ಮಾಧ್ಯಮ ಗೋಷ್ಠಿ ಮಾಡದೆ ಕಾದೆ. ಕೊನೆಗೂ ಅವರಿಲ್ಲದೆ ಮಾಧ್ಯಮಗಳ ಮುಂದೆ ಬರಬೇಕಾಗಿದೆ. ದಿ ಡೆವಿಲ್ 2018 ರಲ್ಲೇ ದರ್ಶನ್ ಜೊತೆಗೆ ಕಮಿಟ್ ಆಗಿದ್ದ ಸಿನಿಮಾ.
ಕೋವಿಡ್ ಕಾರಣದಿಂದ ಸಿನಿಮಾ ತಡವಾಯ್ತು. ದರ್ಶನ್ ಈ ಸಿನಿಮಾದ ಅತಿದೊಡ್ಡ ಶಕ್ತಿ. ಅವರಿಲ್ಲದೆ ಸಿನಿಮಾ ಬಿಡುಗಡೆ ಮಾಡಬೇಕಾಗಿದೆ ಎಂದರು.
