Ashwaveega News 24×7 ಡಿಸೆಂಬರ್. 02: ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ʼಕಾಂತಾರ ಚಾಪ್ಟರ್ 1’ ಚಿತ್ರದ ದೈವವನ್ನು ದೆವ್ವ ಎಂದಿದ್ದು, ನಟ ನಿರ್ಗೇಶಕ ರಿಷಬ್ ಶೆಟ್ಟಿ ನಟನೆಯನ್ನು ತಮಾಷೆಯಾಗಿ ಅನುಕರಣೆ ಮಾಡಿ ವಿವಾದಕ್ಕೀಡಾಗಿತ್ತು.
ʼಕಾಂತಾರʼ ಚಿತ್ರದ ದೈವವನ್ನು ‘ಹೆಣ್ಣು ದೆವ್ವ’ ಎಂದು ಹೇಳಿ ರಣವೀರ್ ಟೀಕೆಗೆ ಗುರಿಯಾಗಿದ್ದು, ಅವರು ಕ್ಷಮೆಯಾಚಿಸಬೇಕು ಎಂದು ವ್ಯಾಪಕ ಆಗ್ರಹ ಕೇಳಿ ಬಂದಿದೆ.
ಕರಾವಳಿಯ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ರಣವೀರ್ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೇಮ್ ಆನ್ ಯು ರಣವೀರ್ ಸಿಂಗ್ ಹ್ಯಾಶ್ ಟಾಗ್ ಎಕ್ಸ್ ನಲ್ಲಿ ಟ್ರೆಂಡಿಂಗ್ ಆಗಿದೆ.
ಅಲ್ಲದೆ ಅವರ ಮುಂಬರುವ ಚಿತ್ರ ಧುರಂಧರ್ ಚಿತ್ರವನ್ನು ಯಾರೂ ವೀಕ್ಷಿಸಬಾರದು, ಬಹಿಷ್ಕರಿಸಬೇಕು ಎಂಬ ಕೂಗು ಕೇಳಿಬರುತ್ತಿದೆ.
ಹಿಂದೂ ಜಾಗೃತಿ ಸಂಘಟನೆ ಕಾರ್ಯಕರ್ತರು ಪೊಲೀಸರಿಗೆ ರಣವೀರ್ ಸಿಂಗ್ ವಿರುದ್ಧ ದೂರು ನೀಡಿದ್ದಾರೆ.
ಇನ್ನು ಕಾಂತಾರ ಅನುಕರಣೆ ವಿವಾದದ ಬಗ್ಗೆ ಇಂದು ಮೌನ ಮುರಿದ ರಣವೀರ್ ಸಿಂಗ್, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಕಾಂತಾರ ಅಧ್ಯಾಯ 1 ರಲ್ಲಿ ರಿಷಬ್ ಅವರ ಅದ್ಭುತ ಅಭಿನಯವನ್ನು ಎತ್ತಿ ತೋರಿಸುವುದು ತಮ್ಮ ಉದ್ದೇಶವಾಗಿತ್ತು ಹೊರತು ಬೇರೇನೂ ಅಲ್ಲ,ನಾನು ಭಾರತದಲ್ಲಿನ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಯನ್ನು ಗೌರವಿಸುತ್ತೇನೆ ಎಂದಿದ್ದಾರೆ.
