Ashwaveega News 24×7 ಫೆಬ್ರವರಿ 24 – 2026 ಬೆಂಗಳೂರು : ರಾಜ್ಯ ಕಾಂಗ್ರೆಸ್ನಲ್ಲಿ ಮತ್ತೊಂದು ಪವರ್ ಸೆಂಟರ್ ಸೃಷ್ಟಿಯಾಗುತ್ತಿದೆಯೇ ? ಮುಖ್ಯಮಂತ್ರಿ Siddaramaiah ಮತ್ತು ಉಪಮುಖ್ಯಮಂತ್ರಿ D. K. Shivakumar ಅವರ ನಡುವಿನ ನಾಯಕತ್ವ ಚರ್ಚೆಗಳ ಮಧ್ಯೆ, ಸಚಿವ Satish Jarkiholi ಶಕ್ತಿ ಪ್ರದರ್ಶನ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆಯೇ ?
ಇತ್ತೀಚೆಗೆ ದೆಹಲಿಗೆ ಆಪ್ತ ಶಾಸಕರೊಂದಿಗೆ ಭೇಟಿ ನೀಡಿದ ಸತೀಶ್ ಜಾರಕಿಹೊಳೀ, ಮತ್ತೊಮ್ಮೆ ರಾಜ್ಯ ಪ್ರವಾಸಕ್ಕೆ ಸಿದ್ಧರಾಗಿದ್ದಾರೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. “ಸಾಹುಕಾರ್” ಎಂದೇ ಕರೆಯಲ್ಪಡುವ ಸತೀಶ್, ತಮ್ಮ ಬೆಂಬಲಿಗರೊಂದಿಗೆ ಸಂಘಟಿತವಾಗಿ ಕಾಣಿಸಿಕೊಳ್ಳುತ್ತಿರುವುದು ಕಾಂಗ್ರೆಸ್ ಒಳರಾಜಕಾರಣದಲ್ಲಿ ಪ್ರಶ್ನೆ ಉದ್ಭವಿಸಿದೆ.
ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಡುವೆ ನಾಯಕತ್ವದ ವಿಚಾರವಾಗಿ ಗದ್ದಲ ನಡೆಯುತ್ತಿರುವ ಸಂದರ್ಭದಲ್ಲೇ, ಸತೀಶ್ ಜಾರಕಿಹೊಳೀ ತಮ್ಮದೇ ಬಣವನ್ನು ಸೃಷ್ಟಿಸಿಕೊಳ್ಳಲು ಮುಂದಾಗಿದ್ದಾರೆಯೇ ? ಬಜೆಟ್ ಅಧಿವೇಶನದ ಮುನ್ನ ಅವರ ಚಟುವಟಿಕೆಗಳು ಕೇವಲ ಸಂಘಟನಾ ಬಲವರ್ಧನೆಯ ಭಾಗವೇ ? ಅಥವಾ ಹೈಕಮಾಂಡ್ಗೆ ಪರ್ಯಾಯ ನಾಯಕತ್ವದ ಸಂದೇಶವೇ ?
ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಭೇಟಿಯ ನಂತರ ರಾಜ್ಯ ಪ್ರವಾಸಕ್ಕೆ ಮುಂದಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ . ಇದರಿಂದ ಹೈಕಮಾಂಡ್ ಮೌನಸಮ್ಮತಿ ಇದೆಯೇ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ತಂತ್ರದ ಭಾಗವಾಗಿಯೇ ಸತೀಶ್ ಅವರಿಗೆ ಅವಕಾಶ ನೀಡಲಾಗಿದೆಯೇ ?
ರಾಜ್ಯ ರಾಜಕಾರಣದಲ್ಲಿ ಸಿಎಂ–ಡಿಸಿಎಂ ಸಮನ್ವಯದ ಚರ್ಚೆ ಮುಂದುವರಿದಿರುವ ವೇಳೆಯಲ್ಲಿ, “ಪರ್ಯಾಯ ನಾಯಕತ್ವ” ಎಂಬ ಪದ ಮತ್ತೊಮ್ಮೆ ಪ್ರಸ್ತಾಪಕ್ಕೆ ಬಂದಿದೆ. ಇಬ್ಬರೂ ಒಮ್ಮತದ ನಿರ್ಧಾರ ಕೈಗೊಳ್ಳದ ಪರಿಸ್ಥಿತಿಯಲ್ಲಿ, ಮೂರನೇ ಆಯ್ಕೆ ಸಾಧ್ಯವೇ ಎಂಬ ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.
ಸದ್ಯಕ್ಕೆ ಸತೀಶ್ ಜಾರಕಿಹೊಳೀ ಅವರ ನಡೆ ಕುತೂಹಲ ಕೆರಳಿಸಿದೆ . ಇದು ಕೇವಲ ಸಂಘಟನೆ ಬಲಪಡಿಸುವ ಯತ್ನವೇ ? ಅಥವಾ ರಾಜ್ಯ ಕಾಂಗ್ರೆಸ್ನಲ್ಲಿ ಹೊಸ ಪವರ್ ಸೆಂಟರ್ ಹುಟ್ಟುವ ಮುನ್ಸೂಚನೆಯೇ ? ಎಂಬ ಪ್ರಶ್ನೆಗಳು ಕೇಳಿ ಬರ್ತಾಯಿದೆ .
