Ashwaveega News 24×7 ಡಿಸೆಂಬರ್. 13: ಮಂಡ್ಯದಲ್ಲಿ ರೈತರ ಮಕ್ಕಳಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವಂತೆ. ಇದು ರೈತ ಸಂಕುಲಕ್ಕೆ ದೊಡ್ಡ ಪ್ರಾಬ್ಲಮ್ ಅಗಿದೆ.. ಇತ್ತೀಚೆಗೆ ಹೆಣ್ಣು ಸಿಗಲಿ ಅಂತ ಕೆಲವು ಅವಿವಾಹಿತರು ಮಾದಪ್ಪನಿಗೆ ಹರಕೆ ಕಟ್ಟಿಕೊಂಡು ಪಾದಯಾತ್ರೆ ಮಾಡಿದ್ದರು. ಹಿಂದೆಯಷ್ಟೆ ಮದುವೆಯಾಗದ ಯುವಕರು ಗ್ರಾಮಪಂಚಾಯಿಗೆ ಪತ್ರ ಬರೆದು ಮಠ ಕಟ್ಟಿಕೊಡಿ ಅಂತಾ ಮನವಿಮಾಡಿದ್ರು… ಇನ್ನೂ ಇದೀಗ ಇನೋದು ಘಟನೆ ಬೆಳಕಿಗೆ ಬಂದಿದೆ… ಅದೆನಂದ್ರೆ ಅವಿವಾಹಿತ ಯುವ ರೈತರ ಬೆಂಬಲಕ್ಕೆ ಬಿಜೆಪಿ ಕಾರ್ಯಕರ್ತರು ನಿಂತಿದ್ದು.. ಅವಿವಾಹಿತ ಯುವರ ಜೊತೆ ಪ್ರತಿಭಟನೆ ಮಾಡಿದ್ದಾರೆ..
ಸಕ್ಕರೆ ನಾಡು ಎಂದೇ ಪ್ರಸಿದ್ದಿಯಾದ ಮಂಡ್ಯದಲ್ಲಿ ಯುವರಿಗೆ ಹೆಣ್ಣು ಸಿಕ್ಕಿಲ್ಲ ಅನೋ ನೋವಿ ಕಾಣ್ತಿದೆ.. ಮಂಡದ್ಯ ಕೃಷಿ ಪ್ರಧಾನ ಜಿಲ್ಲೆ.. ಇಲ್ಲಿ ಜನರು ತಮ್ಮ ಜೀವನಕ್ಕೆ ಕೃಷಿಯನ್ನೆ ಆಧಾರವಾಗಿಟ್ಟುಕೊಂಡಿದ್ದಾರೆ.. . ಒಂದು ಕಡೆ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದರೆ, ಮತ್ತೊಂದೆಡೆ ರೈತರು ತಮ್ಮ ಗಂಡು ಮಕ್ಕಳಿಗೆ ಮದುವೆ ಮಾಡೋದಕ್ಕೆ ಹೊರಾಡುತ್ತಿದ್ದಾರೆ.
ಕಾರಣ ಹೆಣ್ಣೆತ್ತವರು ರೈತರ ಮಕ್ಕಳಿಗೆ ಹೆಣ್ಣು ಕೊಡೋದಕ್ಕೆ ಹಿಂದೇಟು ಹಾಕ್ತಿದ್ದಾರೆ.. ಹೀಗಾಗಿ ಇದು ಸದ್ಯ ಸಾಮಾಜಿಕ ಪಿಡುಗಾಗಿಗಿದೆ.. ಇನ್ನು ಈ ಯುವಕರು ಮದುವೆಯಾಗ್ತಿಲ್ಲ ಅಂತ ನೋವಿನಲ್ಲಿದ್ರೆ ಇವರ ಕಷ್ಟಕ್ಕೆ ಬಿಜೆಪಿ ಕಾರ್ಯಕರ್ತರು ಕೈ ಜೊಡಿಸಿದ್ದಾರೆ.. ಹೌದು 35 ವರ್ಷ ಕಳೆದರೂ ಹೆಣ್ಣು ಸಿಗದ್ದಿದ್ದಕ್ಕೆ ಇತ್ತೀಚೆಗೆ ಅವಿವಾಹಿತರು ಮಾದಪ್ಪನ ಮೊರೆ ಹೋಗಿದ್ದರು. ಹೆಣ್ಣು ಸಿಗಲಿ ಅಂತ ಹರಕೆ ಕಟ್ಟಿಕೊಂಡು ಪಾದಯಾತ್ರೆ ಮಾಡಿದ್ದರು.
ಜೊತಗೆ ಕೆಲವರು ಗ್ರಾಮ ಪಂಚಾಯಿತಿಗೆ ಪತ್ರ ಬೆರದು ಮಠ ಕಟ್ಟಿಸಿಕೊಡಿ ಅಂತ ಬೇಡಿಕೆ ಇಟ್ಟರು.. ಇದೀಗ ಅವರ ಪರವಾಗಿ ಬಿಜೆಪಿ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದ್ದು, ಹೊಸದೊಂದು ಯೋಜನೆ ಜಾರಿಗೆ ತರುವಂತೆ ಆಗ್ರಹಿಸಿದ್ದಾರೆ.. ಮದುವೆ ಗಂಡಿನಂತೆ ಹಣೆಗೆ ಬಾಸಿಂಗ ಕಟ್ಟಿಕೊಂಡು, ತಲೆಗೆ ಮೈಸೂರು ಪೇಟ ಹಾಕಿಕೊಂಡು , ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡಲಾಗಿದೆ.
ಶಾದಿ ಭಾಗ್ಯದ ಮಾದರಿಯಲ್ಲಿ ರೈತರನ್ನ ಮದುವೆಯಾಗುವ ಯುವತಿಗೆ 5 ಲಕ್ಷ ರೂ ಪ್ರೋತ್ಸಾಹ ಧನ ನೀಡಬೇಕು. ಈ ರೀತಿ ಮಾಡಿದರೆ ರೈತರ ವಿವಾಹಕ್ಕೆ ಉತ್ತೇಜನ ನೀಡಿದಂತಾಗುತ್ತದೆ. ಸಮಸ್ಯೆಯೂ ಪರಿಹಾರ ಆಗುತ್ತೆ. ಸರ್ಕಾರ ಕೂಡಲೇ ಯೋಜನೆಯನ್ನು ಘೋಷಣೆ ಮಾಡಬೇಕು ಎಂದು ಬಿಜೆಪಿ ಕಾರ್ಯಕರ್ತ ಶಿವು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ರೈತರ ಮಕ್ಕಳಿಗೆ ಕಂಕಣ ಭ್ಯಾಗ ಕೂಡಿ ಬರುವುದು ಕಷ್ಟವಾಗಿದೆ.
ಈ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ.. ಕೈ ತುಂಬ ದುಡಿಮೆ ಇದ್ದರೂ ರೈತ ಅನ್ನೋ ಕಾರಣಕ್ಕೆ ಹೆಣ್ಣು ಕೊಡುತ್ತಿಲ್ಲ.
