Ashwaveega News 24×7 ಜನವರಿ 12 – Gold Price Today – ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: ₹ 1,38,830 ರೂ. 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,27,260ರೂ. ಬೆಳ್ಳಿ ಬೆಲೆ 1 ಕೆಜಿ : ₹2,57,900
ಎಲ್ಲರೂ ಸಂಕ್ರಾಂತಿ ಹಬ್ಬದ ತಯಾರಿಯಲ್ಲಿದ್ದಾರೆ. ಆದರೆ ಚಿನ್ನ ಮಾರುಕಟ್ಟೆಯಲ್ಲಿ ಏನಾಗುತ್ತಿದೆ ಎಂಬ ಸತ್ಯ (Real Fact) ಎಷ್ಟೋ ಜನರಿಗೆ ಗೊತ್ತಿಲ್ಲ. ಗ್ರಾಹಕರು ಚಿನ್ನದ “ರೇಟ್ ಕಮ್ಮಿ ಆಗುತ್ತೆ” ಎಂದು ಕಾಯುತ್ತಿದ್ದಾರೆ, ಆದರೆ ಬಂಗಾರ ಅಂಗಡಿಯವರ ಲೆಕ್ಕಾಚಾರವೇ ಬೇರೆ ಇದೆ.
ಸಂಕ್ರಾಂತಿ ಹಬ್ಬದ ಸಮಯದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಭಾರೀ ಏರಿಕೆಯಾಗಿದೆ, ಒಂದೇ ದಿನದಲ್ಲಿ 10 ಗ್ರಾಂ ಚಿನ್ನದ ಬೆಲೆ ₹1700 ಏರಿಕೆಯಾಗಿ ₹1,43,000 ತಲುಪಿದೆ, ಮತ್ತು ಬೆಳ್ಳಿ ಬೆಲೆ ₹10,000 ಏರಿಕೆಯಾಗಿ ಪ್ರತಿ ಕೆಜಿ ₹2,70,000 ತಲುಪಿದೆ; ಈ ಏರಿಕೆ ಹೂಡಿಕೆದಾರರಿಗೆ ಸಂತಸ ತಂದಿದ್ದರೂ, ಗ್ರಾಹಕರಿಗೆ ಆಘಾತ ನೀಡಿದೆ, ಮುಂದಿನ ತಿಂಗಳಲ್ಲಿ ಬೆಳ್ಳಿ ಬೆಲೆ ₹3 ಲಕ್ಷ ತಲುಪುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ.
ನಮಗೆ ಸಿಕ್ಕಿರುವ ಮಾರುಕಟ್ಟೆ ಮೂಲಗಳ ಪ್ರಕಾರ, ಸಂಕ್ರಾಂತಿ ಹಬ್ಬ ಹತ್ತಿರ ಬರುತ್ತಿದ್ದಂತೆ ಚಿನ್ನದ ದರದಲ್ಲಿ ಗ್ರಾಮ್ಗೆ ₹500 ರಿಂದ ₹1000 ಏರಿಕೆಯಾಗುವ ಸಾಧ್ಯತೆ ಇದೆ.

ಹಬ್ಬದ ಸೀಸನ್ನಲ್ಲಿ ಡಿಮ್ಯಾಂಡ್ ಹೆಚ್ಚಾಗುವುದರಿಂದ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಕುಸಿಯುತ್ತಿರುವುದರಿಂದ, ಚಿನ್ನದ ದರ ಏರುವುದು ಖಚಿತ ಅಂತ ತಿಳಿದಿಬಂದಿದೆ .
ಸದ್ಯಕ್ಕೆ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗಿಲ್ಲ. ದರ ನಿನ್ನೆಯ ಮಟ್ಟದಲ್ಲೇ ಇದೆ. ಹೀಗಾಗಿ, ಹಬ್ಬಕ್ಕೆ ಚಿನ್ನ ಬೇಕೇ ಬೇಕು ಎನ್ನುವವರಿಗೆ ಇಂದೇ ಬುಕ್ ಮಾಡುವುದು ಜಾಣತನದ ನಡೆಯಾಗಿದೆ. ನಾಳೆ ಅಥವಾ ನಾಡಿದ್ದು ದರ ಏರಿದರೆ, ನೀವು ಕಾಯ್ದಿದ್ದಕ್ಕೂ ಬೆಲೆ ಇಲ್ಲದಂತಾಗುತ್ತದೆ.
