Ashwaveega News 24×7 ಮಾರ್ಚ್ 04 – 2026 : ಮಧ್ಯಪ್ರಾಚ್ಯದಲ್ಲಿ ಯುದ್ಧ ಮತ್ತಷ್ಟು ಭುಗಿಲೆದ್ದಿದೆ ಎಂಬ ಆತಂಕಕಾರಿ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ದುಬೈ, ಸೌದಿ ಅರೇಬಿಯಾ, ಕತಾರ್, ಇಸ್ರೇಲ್ ಸೇರಿದಂತೆ ಹಲವು ರಾಷ್ಟ್ರಗಳು ಕ್ಷಿಪಣಿ ಹಾಗೂ ಡ್ರೋನ್ ದಾಳಿಗೆ ಗುರಿಯಾಗಿವೆ .
ಆದರೆ, ಇಂತಹ ಗಂಭೀರ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಅಂತರಾಷ್ಟ್ರೀಯ ದೃಢೀಕರಣ ಲಭ್ಯವಿಲ್ಲ. ವಿಶ್ವದ ಪ್ರಮುಖ ಮಾಧ್ಯಮಗಳು ಹಾಗೂ ಸರ್ಕಾರಗಳ ಅಧಿಕೃತ ಪ್ರಕಟಣೆಗಳಲ್ಲಿ ಈ ಮಟ್ಟದ ದಾಳಿಗಳ ಬಗ್ಗೆ ಸ್ಪಷ್ಟ ಮಾಹಿತಿ ಹೊರಬಂದಿಲ್ಲ.
ಕೆಲವು ವೈರಲ್ ಪೋಸ್ಟ್ಗಳಲ್ಲಿ Dubai ಮೇಲೆ ಕ್ಷಿಪಣಿ ದಾಳಿ ನಡೆದಿದೆ, Saudi Arabia ರಾಜಧಾನಿ Riyadh ನಲ್ಲಿ ಅಮೆರಿಕದ ಗುಪ್ತಚರ ಕೇಂದ್ರ ಧ್ವಂಸವಾಗಿದೆ ಅಂತೆ . ಅದೇ ರೀತಿ Tel Aviv ನಗರವನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆಸಲಾಗಿದೆ ಅಂತೆ .
ಇದಲ್ಲದೆ, Central Intelligence Agency (CIA) ಕಚೇರಿ ಉಡಾಯಿಸಲಾಗಿದೆ, ನೂರಾರು ಅಮೆರಿಕ ಸೈನಿಕರು ಸಾವನ್ನಪ್ಪಿದ್ದಾರೆ …
ಇರಾನ್ ವಿರುದ್ಧ ಕಠಿಣ ಪದಗಳನ್ನು ಬಳಸುವ ಕೆಲವು ಪೋಸ್ಟ್ಗಳು “ಪ್ರತೀಕಾರದ ಸೇಡಲ್ಲಿ ಇರಾನ್ ಕುದಿಯುತ್ತಿದೆ” ಎಂಬ ಶೈಲಿಯಲ್ಲಿ ಹರಿದಾಡುತ್ತಿವೆ. ಆದರೆ, Iran ಸರ್ಕಾರ ಅಥವಾ United States ಸರ್ಕಾರದಿಂದ ಇಂತಹ ದೊಡ್ಡ ಮಟ್ಟದ ದಾಳಿಗಳ ಬಗ್ಗೆ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ.
ಮಧ್ಯಪ್ರಾಚ್ಯವು ಇತಿಹಾಸಪೂರ್ತಿಯಾಗಿ ಉದ್ವಿಗ್ನ ಪ್ರದೇಶವಾಗಿದ್ದರೂ, ಈ ರೀತಿಯ ಮಹತ್ವದ ದಾಳಿಗಳು ನಡೆದಿದ್ದರೆ ಅದು ಜಾಗತಿಕ ಮಟ್ಟದಲ್ಲಿ ದೊಡ್ಡ ರಾಜತಾಂತ್ರಿಕ ಹಾಗೂ ಸೈನಿಕ ಪ್ರತಿಕ್ರಿಯೆಗೆ ಕಾರಣವಾಗುತ್ತಿತ್ತು .
