Ashwaveega News 24×7 ನವೆಂಬರ್. 16: ಹಲೋ ಪವರ್ ಪ್ರೈವೇಟ್ ಲಿಮಿಟೆಡ್ ಇದೀಗ ವಿದ್ಯುತ್ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸ್ತಿದೆ. ಹಲೋ ಪವರ್ ಇನ್ನಷ್ಟು ಹೈಟೆಕ್ ಆಗಿ ಜನರ ಮುಂದೆ ಬರ್ತಿದೆ.

ಹಲೋ ಪವರ್ ಮೊಬೈಲ್ ಅಪ್ಲಿಕೇಷನ್ ಲೋಕಾರ್ಪಣೆ ಆಗುತ್ತಿದೆ.. ಹಲೋ ಪವರ್ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ರಾಮಚಂದ್ರ ಆರ್.ಆನವೇರಿ ಅವರ ಸಾರಥ್ಯದಲ್ಲಿ ರಾಜ್ಯಾದ್ಯಂತ ಸೇವಾ ಸೌಲಭ್ಯ ನೀಡುತ್ತಿದೆ.. ಹಲೋ ಪವರ್ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಕಾರ್ಯಕ್ರಮದಲ್ಲಿ ರಾಜ್ಯದ ಪ್ರಮುಖ ವಿದ್ಯುತ್ ಗುತ್ತಿಗೆದಾರರು, ಕಟ್ಟಡ ನಿರ್ಮಾಣ ಸಂಸ್ಥೆಗಳು ಪಾಲ್ಗೊಂಡಿವೆ.

ಹಲೋ ಪವರ್, ಎಲೆಕ್ಟ್ರಿಕ್ ಕಾಂಟ್ರಾಕ್ಟಿಂಗ್ ಕಂಪನಿ ಆಗಿದ್ದು, ಆನ್ಲೈನ್ಹಾಗೂ ಆಫ್ಲೈನ್ನಲ್ಲಿ ಸೇವೆಗಳನ್ನ ನೀಡಲಿದೆ. ಇದು ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ವ್ಯಾಪಕ ಶ್ರೇಣಿಯ ವಿದ್ಯುತ್ ಪರಿಹಾರಗಳನ್ನು ಒದಗಿಸುತ್ತದೆ.
ಸೌರ ಫಲಕ ಸ್ಥಾಪನೆ ಮತ್ತು ಸ್ಮಾರ್ಟ್ ಶಕ್ತಿ ನಿರ್ವಹಣಾ ವ್ಯವಸ್ಥೆಗಳನ್ನು ಒಳಗೊಂಡಂತೆ ನವೀಕರಿಸಬಹುದಾದ ಇಂಧನ ಪರಿಹಾರಗಳನ್ನ ಒದಗಿಸುತ್ತದೆ . ಸರ್ಕಾರಿ ವಿದ್ಯುತ್ ಸೇವೆಗಳು, ಹೊಸ ವಿದ್ಯುತ್ ಸಂಪರ್ಕಗಳನ್ನ ನೀಡಲು ಹಲೋ ಪವರ್ ನೆರವಾಗುತ್ತೆ.
ಶ್ರೀ ಶ್ರೀ ಯತಿರಾಜ ಜೀಯರ್ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ನೆರವೇರಿದ್ದು ಯದುಗಿರಿ ಯತಿರಾಜ ಮಠದ ಶ್ರೀಗಳು ಹಲೋ ಪವರ್ APP ಲೋಕಾರ್ಪಣೆ ಮಾಡಿದರು.

ಇನ್ನು ಈ ಆಯಪ್ ಸಣ್ಣ ಮನೆಗೆ ವಿದ್ಯುತ್ ಅಳವಡಿಕೆಯಿಂದ ಹಿಡಿದು, ದೊಡ್ಡ ಪ್ರಮಾಣದ ಕೈಗಾರಿಕಾ ವೈರಿಂಗ್ ವರೆಗೂ ಹಾಗೇ ನಿರ್ಮಾಣ ಯೋಜನೆಗಳಿಗೆ ಪೂರ್ಣ ಪ್ರಮಾಣದ ವಿದ್ಯುತ್ ಗುತ್ತಿಗೆ ಕೆಲಸವನ್ನ ನೋಡಿಕೊಳ್ಳಲಿದೆ.
