Ashwaveega News 24×7 ಮಾರ್ಚ್ 02– 2026 : ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಮತ್ತಷ್ಟು ಉರಿಯುತ್ತಿದೆ .
ಕುವೈತ್ ಆಕಾಶದಲ್ಲಿ ಹಾರಾಡುತ್ತಿದ್ದ ಅಮೆರಿಕದ ಎಫ್-15 ಯುದ್ಧ ವಿಮಾನ ಪತನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
F-15 Eagle ಮಾದರಿಯ ಈ ಫೈಟರ್ ಜೆಟ್ ಅಚಾನಕ್ ನೆಲಕ್ಕುರುಳಿದ್ದು , ಇದು ತಾಂತ್ರಿಕ ದೋಷವೇ ? ಅಥವಾ ದಾಳಿ ? ಎಂಬ ಪ್ರಶ್ನೆ ಮೂಡಿಸಿದೆ. ಕ್ರಾಶ್ ಆಗುವ ಕ್ಷಣದಲ್ಲಿ ಪೈಲಟ್ ಸುರಕ್ಷಿತವಾಗಿ ಪ್ಯಾರಾಶೂಟ್ ಮೂಲಕ ಜಂಪ್ ಮಾಡಿದಿರುವುದು ತಿಳಿದುಬಂದಿದೆ. ಪೈಲಟ್ನ ಸ್ಥಿತಿ ಸ್ಥಿರವಾಗಿದೆ .
ಇದಕ್ಕೆ ಪಕ್ಕದಲ್ಲಿ, ಅಮೆರಿಕ – ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದೆ. ಇರಾನ್ ಕ್ಷಿಪಣಿ ದಾಳಿಗಳು, ಇಸ್ರೇಲ್ ಪ್ರತಿದಾಳಿಗಳು, ಅಮೆರಿಕದ ಯುದ್ಧ ಸಿದ್ಧತೆ — ಇವೆಲ್ಲ ಸೇರಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಇದು ಸಾಮಾನ್ಯ ಅಪಘಾತವೇ ? ಅಥವಾ ಇರಾನ್ ನಡೆಸಿದ ಗುಪ್ತ ದಾಳಿ ? ಎಂಬ ಪ್ರಶ್ನೆಗೆ ಇನ್ನೂ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ. ಆದರೆ ಮಧ್ಯಪ್ರಾಚ್ಯದ ದೇಶಗಳು ಧಗಧಗ ಹೊತ್ತಿ ಉರಿಯುತ್ತಿರುವುದು ಮಾತ್ರ ಸ್ಪಷ್ಟ. ಜಗತ್ತಿನ ಗಮನ ಈಗ ಈ ಪ್ರದೇಶದತ್ತ ನೆಟ್ಟಿದೆ. ಮುಂದಿನ ಕ್ಷಣದಲ್ಲಿ ಏನಾಗಲಿದೆ?
