Ashwaveega News 24×7 ಮಾರ್ಚ್ 02 – 2026 : ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾಳಗ ಕ್ಷಣಕ್ಷಣಕ್ಕೂ ತೀವ್ರಗೊಳ್ಳುತ್ತಿದೆ. ಇಸ್ರೇಲ್ ಗೆ ಅತಿದೊಡ್ಡ ಶಾಕ್ ಎದುರಾಗಿದೆ. ದೇಶದ ಪರಮಾಣು ರಿಯಾಕ್ಟರ್ ಮೇಲೆ ಭೀಕರ ಮಿಸೈಲ್ ದಾಳಿ ನಡೆದಿರುವ ವರದಿಗಳು ಹೊರಬಿದ್ದಿವೆ .
ಇರಾನ್ ನಿರಂತರವಾಗಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿದ್ದು, ಅದರ ಹೊಡೆತಕ್ಕೆ ಇಸ್ರೇಲ್ ತತ್ತರಿಸಿದೆ. ಅಮೆರಿಕದ ವಾರ್ನಿಂಗ್ಗೂ ಡೋಂಟ್ ಕೇರ್ ಎಂದಂತೆ ಇರಾನ್ ಬಿಗ್ ಅಟ್ಯಾಕ್ ನಡೆಸಿದೆ .
ಇರಾನ್ನ ಕ್ಷಿಪಣಿ ಮಳೆಯ ನಡುವೆ ಇಸ್ರೇಲ್ ರಾಜಧಾನಿ ಟೆಲ್ ಅವಿವ್ ದಟ್ಟ ಹೊಗೆಯಿಂದ ಆವೃತವಾಗಿದೆ. ಕ್ಷಿಪಣಿಗಳ ಸ್ಫೋಟದಿಂದ ಕಟ್ಟಡಗಳು ನಾಶವಾಗಿದ್ದು, ಭಾರೀ ಸಾವು ನೋವು ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಈ ದಾಳಿಯಿಂದ ಕೇವಲ ಇಸ್ರೇಲ್ ಮಾತ್ರವಲ್ಲ, ಸಂಪೂರ್ಣ ಪ್ರದೇಶವೇ ತೀವ್ರ ಆತಂಕಕ್ಕೊಳಗಾಗಿದೆ. ಕೆರಳಿದ ಇರಾನ್ ಇದೀಗ ಅಮೆರಿಕದ ಮಿತ್ರ ರಾಷ್ಟ್ರಗಳ ಮೇಲೂ ಕಣ್ಣಿಟ್ಟಿದೆ .
ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿರುವ ಅಮೆಜಾನ್ ಡೇಟಾ ಸೆಂಟರ್ ಮೇಲೆಯೂ ಇರಾನ್ ದಾಳಿ ನಡೆಸಿದೆ ಎಂಬ ವರದಿಗಳು ಸದ್ದು ಮಾಡುತ್ತಿವೆ. ಇದರೊಂದಿಗೆ ಬಹ್ರೇನ್, ಕುವೈತ್, ಓಮನ್, ಕತಾರ್ ಹಾಗೂ ಸೌದಿ ಅರೇಬಿಯಾ ದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಈ ಬೆಳವಣಿಗೆಗಳು ಮೂರನೇ ವಿಶ್ವಯುದ್ಧದ ಆತಂಕವನ್ನೇ ಹುಟ್ಟಿಸಿವೆ. ಮುಂದಿನ ಕ್ಷಣದಲ್ಲಿ ಏನಾಗಲಿದೆ ಎಂಬ ಆತಂಕದಲ್ಲಿ ವಿಶ್ವ ಸಮುದಾಯ ಕಾದು ನೋಡುತ್ತಿದೆ.
