Ashwaveega News 24×7 ಫೆಬ್ರವರಿ 22 – 2026 ಬೆಂಗಳೂರು : ಕಿರುತೆರೆ ನಟಿ Kavya Gowda ಅವರ ಕುಟುಂಬದ ಕಲಹ ಮತ್ತೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ . ಇತ್ತೀಚೆಗೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಜಾಲತಾಣದಲ್ಲಿ ವಿಡಿಯೋ ಸಾಕ್ಷ್ಯ ಹರಿಬಿಟ್ಟಿರುವ ಕಾವ್ಯಗೌಡ , ತಮ್ಮ ವಿರುದ್ಧ ಬಂದ ಆರೋಪಗಳನ್ನು ತಳ್ಳಿಹಾಕಿದ್ದಾರೆ .
ಘಟನೆಯ ಕುರಿತು ಓರಗಿತ್ತಿ ಪ್ರೇಮಾ, ನಟಿ ಕಾವ್ಯ ಹಾಗೂ ಅವರ ಪತಿ ಸೋಮಶೇಖರ್ ವಿರುದ್ಧ ಹಲ್ಲೆ ಆರೋಪದ ಬಗ್ಗೆ ದೂರು ನೀಡಿದ್ದರು . ಇಬ್ಬರೂ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಪ್ರೇಮಾ ಆರೋಪಿಸಿದ್ದರು . ಆದರೆ, ಈ ಆರೋಪಗಳು ಸುಳ್ಳು ಎಂದು ಹೇಳಿರುವ ಕಾವ್ಯಗೌಡ , ಸಿಸಿಟಿವಿ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ .
ಕಾವ್ಯಗೌಡ ಪೋಸ್ಟ್ನಲ್ಲಿ , ಚಪ್ಪಲಿ ಎಸೆದಿದ್ದು ಪ್ರೇಮಾ ಮತ್ತು ಆಕೆಯ ಸಹೋದರಿ ಎಂದು ಸ್ಪಷ್ಟಪಡಿಸಲಾಗಿದೆ. ಗಲಾಟೆ ವೇಳೆ ನಡೆದ ಘಟನೆಗಳ ಸಂಪೂರ್ಣ ದೃಶ್ಯಾವಳಿಯನ್ನು ಬಿಡುಗಡೆ ಮಾಡಿ, ತಮ್ಮ ಕುಟುಂಬದ ಮೇಲೆ ಬಂದಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಇದೇ ಕುಟುಂಬದ ಒಳಜಗಳ ಕಳೆದ ತಿಂಗಳಲ್ಲಿಯೇ ಠಾಣೆ ಮೆಟ್ಟಿಲೇರಿತ್ತು. ಅಣ್ಣ-ತಮ್ಮಂದಿರಾದ ನಂದೀಶ್ ಮತ್ತು ಸೋಮಶೇಖರ್ ನಡುವೆ ನಡೆದ ಬಡಿದಾಟವೂ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಮತ್ತೆ ಗಲಾಟೆಗೆ ಸಂಬಂಧಪಟ್ಟ ವಿಡಿಯೋ ಸಾಕ್ಷ್ಯ ಹೊರಬಂದಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ .
ಈ ಸಂಬಂಧ ಬೆಂಗಳೂರಿನ Ramamurthy Nagar Police Station ನಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎರಡೂ ಪಕ್ಷಗಳ ಹೇಳಿಕೆಗಳನ್ನು ಪಡೆದು ತನಿಖೆ ಮುಂದುವರಿಸಿದ್ದಾರೆ .
