Ashwaveega News 24×7 ಫೆಬ್ರವರಿ 23 – 2026 ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ “ವಿರೋಶ್” ಜೋಡಿ ಮತ್ತೆ ಟ್ರೆಂಡ್ ಆಗಿದೆ . ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಪಡೆದ Rashmika Mandanna ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ .
“ತುಂಬಾ ಪ್ರೀತಿಯಿಂದ ನೀವು ನಮಗೆ ಒಂದು ಹೆಸರನ್ನು ಇಟ್ಟಿದ್ದೀರಿ. ನೀವೇ ನಮ್ಮ ಜೋಡಿಯನ್ನು ‘ವಿರೋಶ್’ ಎಂದಿದ್ದೀರಿ. ನಮ್ಮದು ವಿರೋಶ್ ಜೋಡಿ… ಮದುವೆಗೆ ಬನ್ನಿ” ಎಂದು ರಶ್ಮಿಕಾ ಬರೆದಿದ್ದು, ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ . “ಹೃದಯದಿಂದ ಗೌರವ ಪೂರ್ವಕವಾಗಿ ನಿಮ್ಮನ್ನು ಆಹ್ವಾನಿಸುತ್ತೇವೆ” ಎಂಬ ಸಾಲುಗಳು ಕೂಡ ಕುತೂಹಲ ಹೆಚ್ಚಿಸಿವೆ .
ಇದರೊಂದಿಗೆ Vijay Deverakonda ಮತ್ತು ರಶ್ಮಿಕಾ ಮಂದಣ್ಣ ಮದುವೆ ವಿಚಾರಕ್ಕೆ ಅಧಿಕೃತ ಮುದ್ರೆ ಬಿದ್ದಿದೆಯೇ ಎಂಬ ಪ್ರಶ್ನೆ ಮೂಡಿದೆ. ಫೆಬ್ರವರಿ 26ರಂದು ರಾಜಸ್ಥಾನದಲ್ಲಿ ಅದ್ಧೂರಿಯಾಗಿ ವಿವಾಹ ನಡೆಯಲಿದೆ ಎಂಬ ಮಾತುಗಳು ಹರಿದಾಡುತ್ತಿವೆ.
ಆದರೆ, ಈ ಪೋಸ್ಟ್ ಸಿನಿಮಾ ಪ್ರಚಾರದ ಭಾಗವೇ ? ಅಥವಾ ನಿಜವಾಗಿಯೂ ಮದುವೆ ಘೋಷಣೆಯೇ ? ಎಂಬುದರ ಬಗ್ಗೆ ಸ್ಪಷ್ಟನೆ ಇನ್ನೂ ಲಭ್ಯವಾಗಿಲ್ಲ. “ವಿರೋಶ್” ಜೋಡಿ ಮದುವೆ ಸುದ್ದಿಗೆ ಅಭಿಮಾನಿಗಳು ಶುಭಾಶಯಗಳ ಮಳೆಗರೆಸುತ್ತಿದ್ದಾರೆ .
ವಿಜಯ್–ರಶ್ಮಿಕಾ ಜೋಡಿ ನಿಜವಾಗಿಯೇ ಕಲ್ಯಾಣ ಮಂಟಪಕ್ಕೆ ಏರಲಿದೆಯೇ ? ಎಂಬ ಕುತೂಹಲಕ್ಕೆ ಉತ್ತರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
