Ashwaveega News 24×7 ಫೆಬ್ರವರಿ 22 – 2026 ಬೆಂಗಳೂರು : 25 ವರ್ಷಗಳ ಹಿಂದೆ ಬಿಡುಗಡೆಯಾಗಿ ಯಶಸ್ಸು ಕಂಡ Majestic ಚಿತ್ರದ ಹೆಸರಿನಲ್ಲೇ ಇದೀಗ ಮತ್ತೊಂದು ಸಿನಿಮಾ ನಿರ್ಮಾಣವಾಗಿದೆ . ಹೊಸ ಚಿತ್ರಕ್ಕೆ Majestic-2 ಎಂಬ ಶೀರ್ಷಿಕೆ ಇಡಲಾಗಿದ್ದು, ಅದರ ಟ್ರೈಲರ್ ಬಿಡುಗಡೆ ಸಮಾರಂಭ ಬುಧವಾರ ನೆರವೇರಿತು. ಚಿತ್ರವು ಮಾರ್ಚ್ ತಿಂಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.
ಅಮ್ಮಾ ಎಂಟರ್ಪ್ರೈಸಸ್ ಬ್ಯಾನರ್ನಲ್ಲಿ ಚಿತ್ರದುರ್ಗದ ಹೆಚ್. ಆನಂದಪ್ಪ ಬಿಗ್ ಬಜೆಟ್ನಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ . ಹಿರಿಯ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಪುತ್ರ ಭರತ್ ಕುಮಾರ್ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ಹಿರಿಯ ನಟಿ Shruti ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮತ್ತೊಬ್ಬ ಹಿರಿಯ ನಟಿ Malashri ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ನಾಯಕಿಯಾಗಿ ಸಂಹಿತಾ ವಿನ್ಯಾ ಅಭಿನಯಿಸಿದ್ದಾರೆ .

ಚಿತ್ರದ ಕಥೆ ಈಗಿನ ಮೆಜೆಸ್ಟಿಕ್ ಏರಿಯಾದಲ್ಲಿ ನಡೆಯುವ ವ್ಯವಹಾರಗಳು , ಅಕ್ರಮ ಚಟುವಟಿಕೆಗಳು ಹಾಗೂ ರೌಡಿಸಂ ಹಿನ್ನೆಲೆಯ ಮೇಲೆ ಸಾಗುತ್ತದೆ. ಅಲ್ಲೇ ಹುಟ್ಟಿ ಬೆಳೆದ ಯುವಕನ ಕಣ್ಣಲ್ಲಿ ಆ ಜಗತ್ತನ್ನು ನಿರ್ದೇಶಕರು ತೋರಿಸುವ ಪ್ರಯತ್ನ ಮಾಡಿದ್ದಾರೆ. ಟ್ರೈಲರ್ ಅನ್ನು ನಿರ್ಮಾಪಕರ ಪತ್ನಿ ನಿರ್ಮಲಮ್ಮ ಬಿಡುಗಡೆ ಮಾಡಿದರು.
ನಾಯಕ ಭರತ್ ಕುಮಾರ್ ಮಾತನಾಡಿ, “ಇಷ್ಟು ದೊಡ್ಡ ಟೈಟಲ್ ಇರುವ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ವಿಚಾರ. ಮೆಜೆಸ್ಟಿಕ್ ಸುತ್ತಮುತ್ತ 10 ದಿನ ಸುತ್ತಾಡಿ ಅಲ್ಲಿನ ಜೀವನ ಶೈಲಿಯನ್ನು ಅರಿತುಕೊಂಡೆ” ಎಂದರು. ನಿರ್ಮಾಪಕ ಆನಂದಪ್ಪ ಅವರು, “ನಾಲ್ಕು ಬಾರಿ ಎಂಎಲ್ಎ ಚುನಾವಣೆಗೆ ನಿಂತು ಸೋತಿದ್ದೇನೆ. ಆದರೆ ಈ ಎರಡು ಸಿನಿಮಾಗಳಿಂದ ಅಪಾರ ಅನುಭವ ಪಡೆದಿದ್ದೇನೆ” ಎಂದು ಹೇಳಿದರು.

ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ವಿನು ಮನಸು ಸಂಗೀತ ನಿರ್ದೇಶನ ಮಾಡಿದ್ದಾರೆ. ಛಾಯಾಗ್ರಾಹಕರಾಗಿ ವೀನಸ್ ಮೂರ್ತಿ, ಸಾಹಸ ನಿರ್ದೇಶಕರಾಗಿ ಚಿನ್ನಯ್ಯ ಕಾರ್ಯನಿರ್ವಹಿಸಿದ್ದಾರೆ.
‘ಮೆಜೆಸ್ಟಿಕ್-2’ ಮಾರ್ಚ್ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದು, ಟ್ರೈಲರ್ಗೆ ಈಗಾಗಲೇ ಕುತೂಹಲಕಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

