Ashwaveega News 24×7 ಫೆಬ್ರವರಿ 22 – 2026 ಬೆಂಗಳೂರು : ನಟ Satish Ninasam ಅಭಿನಯದ ಬಹು ನಿರೀಕ್ಷಿತ ಸಿನಿಮಾ The Rise of Ashoka ಬಿಡುಗಡೆ ಹೊಸ್ತಿಲಲ್ಲಿದೆ. ಇದೇ ತಿಂಗಳ 27ರಂದು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಚಿತ್ರ ತೆರೆಗೆ ಬರುತ್ತಿದೆ. ಪ್ರಚಾರ ಕಾರ್ಯಗಳ ಭಾಗವಾಗಿ ಬೆಂಗಳೂರಿನ ಜಿಟಿ ಮಾಲ್ನಲ್ಲಿ ಟ್ರೇಲರ್ ಲಾಂಚ್ ಕಾರ್ಯಕ್ರಮ ಭರ್ಜರಿಯಾಗಿ ನಡೆಯಿತು.
ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ತಾರೆಯರು ಆಗಮಿಸಿ ತಂಡಕ್ಕೆ ಬೆಂಬಲ ಸೂಚಿಸಿದರು. Ravichandran, Duniya Vijay, Vasishta N. Simha, Loose Mada Yogi, Diganth, Nagabhushana N S ಮತ್ತು Shivaraj K R Pete ಸೇರಿದಂತೆ ಅನೇಕರು ಭಾಗವಹಿಸಿದ್ದರು .

ಈ ವೇಳೆ ರವಿಚಂದ್ರನ್ ಮಾತನಾಡಿ, “ಸತೀಶ್ ಕಣ್ಣಲ್ಲಿ ಕಂಡ ಭಾವನೆ ಅರ್ಧ ಗೆಲುವು . ಪ್ರೇಕ್ಷಕರು ಮೊದಲು ಸಿನಿಮಾ ನೋಡಲಿ , ವಿಮರ್ಶೆ ನಂತರ ಮಾಡಲಿ ” ಎಂದು ಮನವಿ ಮಾಡಿದರು . ಸಿನಿಮಾ ಮಾಡುವ ಪ್ರಕ್ರಿಯೆ ಡೆಲಿವರಿ ನೋವಿನಂತದ್ದು ಎಂದು ಹೋಲಿಕೆ ಮಾಡಿದ ಅವರು , ಪ್ರೇಕ್ಷಕರು ಥಿಯೇಟರ್ಗೆ ಹೋಗಿ ಚಿತ್ರವನ್ನು ಬೆಂಬಲಿಸಬೇಕು ಎಂದರು.
ಸತೀಶ್ ನೀನಾಸಂ ಮಾತನಾಡಿ, “ನಮ್ಮ ಸಿನಿಮಾ ಇದೇ ತಿಂಗಳ 27 ರಂದು ನಿಮ್ಮ ಮುಂದೆ ಬರುತ್ತಿದೆ . ಇದು ನನ್ನ ಕನಸು. ನನ್ನ ಕಷ್ಟ ಕಾಲದಲ್ಲಿ ನಿಂತ ಎಲ್ಲರಿಗೂ ಧನ್ಯವಾದ” ಎಂದರು . ತೆಲುಗು ಮತ್ತು ತಮಿಳು ಭಾಷೆಯಲ್ಲೂ 200ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ತಿಳಿಸಿದರು.

ಚಿತ್ರದಲ್ಲಿ ಸತೀಶ್ಗೆ ಜೋಡಿಯಾಗಿ Sapthami Gowda ಅಭಿನಯಿಸಿದ್ದಾರೆ. ಜೊತೆಗೆ ಬಿ.ಸುರೇಶ್, ರವಿಶಂಕರ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯಾ, ಯಶ್ ಶೆಟ್ಟಿ, ಡ್ರಾಗನ್ ಮಂಜು ಮತ್ತು Harisree Ashokan Peradi ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ.
‘ದಿ ರೈಸ್ ಆಫ್ ಅಶೋಕ’ ಚಿತ್ರವನ್ನು ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ನಿರ್ಮಾಣ ಮಾಡಿದ್ದು, ವರ್ಧನ್ ನರಹರಿ, ಜೈಷ್ಣವಿ ಜೊತೆ ಸತೀಶ್ ನೀನಾಸಂ ಸಹ ನಿರ್ಮಾಪಕರಾಗಿದ್ದಾರೆ. ದೊಡ್ಡಮಟ್ಟದಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಈಗಾಗಲೇ ಉತ್ತಮ ನಿರೀಕ್ಷೆ ವ್ಯಕ್ತವಾಗಿದೆ.

