Ashwaveega News 24×7 ಡಿಸೆಂಬರ್. 02: ಕೆಲವೊಮ್ಮೆ ಜೀವನದಲ್ಲಿ ಅತ್ಯಂತ ಸಾಮಾನ್ಯ ಹುಡುಕಾಟವೊಂದು ಅಪ್ರತಿಮ ಆವಿಷ್ಕಾರಕ್ಕೆ ದಾರಿ ಮಾಡಿಕೊಡುತ್ತದೆ.
ಹೌದು, ಆಸ್ಟ್ರೇಲಿಯಾದಲ್ಲಿ ಚಿನ್ನದ ಹುಡುಕಾಟಕ್ಕೆಂದು ಹೊರಟಿದ್ದ ಒಬ್ಬ ಸಾಮಾನ್ಯ ನಿಧಿ ಬೇಟೆಗಾರನಿಗೆ ಸಿಕ್ಕಿದ್ದು ಚಿನ್ನಕ್ಕಿಂತ ಸಾವಿರ ಪಟ್ಟು ಮೌಲ್ಯವುಳ್ಳ ಬಾಹ್ಯಾಕಾಶದಿಂದ ಬಂದ ಅಪರೂಪದ ಉಲ್ಕಾಶಿಲೆ.
ಈ ಆಶ್ಚರ್ಯಕರ ಘಟನೆ ಇಡೀ ವಿಶ್ವವನ್ನೇ ಬೆರಗುಗೊಳಿಸಿದೆ. 2015ರಲ್ಲಿ ಮೆಲ್ಬೋರ್ನ್ ಬಳಿಯ ಮೇರಿಬರೋ ಪ್ರದೇಶದಲ್ಲಿ ಲೋಹ ಶೋಧಕ ಯಂತ್ರದೊಂದಿಗೆ ನಡೆದಿದ್ದ ಡೇವಿಡ್ ಹೋಲ್ ಎಂಬ ನಿಧಿ ಬೇಟೆಗಾರನಿಗೆ ಹಳದಿ ಜೇಡಿಮಣ್ಣಿನಿಂದ ಮುಚ್ಚಲ್ಪಟ್ಟ ಒಂದು ಕೆಂಪು – ಹಳದಿ ಬಣ್ಣದ ಅತ್ಯಂತ ಭಾರವಾದ ಕಲ್ಲು ಸಿಕ್ಕಿತು. ಆ ಪ್ರದೇಶ ಆಸ್ಟ್ರೇಲಿಯಾದ ಪ್ರಸಿದ್ಧ ಗೋಲ್ಡ್ಫೀಲ್ಡ್ಸ್ ಭಾಗವಾದ್ದರಿಂದ ಡೇವಿಡ್ಗೆ ಇದು ಚಿನ್ನದ ಗಟ್ಟಿಯೇ ಎಂಬ ದೃಢ ನಂಬಿಕೆ ಬಂತು.
ಚಿನ್ನಕ್ಕಾಗಿ ಹುಡುಕಿದ ಡೇವಿಡ್ ಹೋಲ್ಗೆ ಸಿಕ್ಕಿದ್ದು ಚಿನ್ನಕ್ಕಿಂತ ಸಾವಿರ ಪಟ್ಟು ಮೌಲ್ಯವುಳ್ಳ ಬಾಹ್ಯಾಕಾಶದ ನಿಧಿ. 2019ರಲ್ಲಿ ಈ ಆವಿಷ್ಕಾರ ವಿಶ್ವದಾದ್ಯಂತ ಸುದ್ದಿಯಾಯಿತು. ಇಂದಿಗೂ ಈ ಕಥೆಯನ್ನು ಚಿನ್ನಕ್ಕಾಗಿ ಹುಡುಕಿದವನಿಗೆ ಸಿಕ್ಕಿದ್ದು ಇಡೀ ವಿಶ್ವ ಎಂದೇ ಕರೆಯಲಾಗುತ್ತದೆ.
ಯಾವುದಕ್ಕೂ ತಗ್ಗದ ಈ ಕಲ್ಲು… ಮನೆಗೆ ತಂದು ಆ ಕಲ್ಲನ್ನು ಒಡೆಯಲು ಡೇವಿಡ್ ಎಲ್ಲ ಪ್ರಯತ್ನಗಳನ್ನೂ ಮಾಡಿದ. ಕಲ್ಲು ಗರಗಸ, ಆಂಗಲ್ ಗ್ರೈಂಡರ್, ಡ್ರಿಲ್, ಭಾರೀ ಸುತ್ತಿಗೆ, ಆಮ್ಲ ಕೂಡ ಬಳಸಿದ್ದರೂ ಕಲ್ಲು ಸ್ವಲ್ಪವೂ ಗೀಚಲಿಲ್ಲ.
ಅದರಂತೆ, ಯಾವ ಉಪಕರಣವೂ ಇದರ ಮೇಲೆ ಪ್ರಭಾವ ಬೀರಲಿಲ್ಲ. ಕೊನೆಗೆ ಡೇವಿಡ್ ತನ್ನ ಸೋಲನ್ನು ಒಪ್ಪಿಕೊಂಡು ಆ ಕಲ್ಲನ್ನು ಮೆಲ್ಬೋರ್ನ್ ವಸ್ತುಸಂಗ್ರಹಾಲಯಕ್ಕೆ ತೆಗೆದುಕೊಂಡು ಹೋದ.
4.6 ಶತಕೋಟಿ ವರ್ಷಗಳ ಹಳೆಯ ಕಲ್ಲಿಗೆ ಮೇರಿಬರೋ ಉಲ್ಕಾಶಿಲೆ ವಿಜ್ಞಾನಿಗಳು ಎಂದು ಹೆಸರಿಟ್ಟರು. ಜೊತೆಗೆ ಹಲವಾರು ಪರೀಕ್ಷೆಗಳ ಪ್ರಕಾರ ಇದು 4.6 ಶತಕೋಟಿ ವರ್ಷಗಳಷ್ಟು ಪ್ರಾಚೀನ, ಅಂದರೆ ನಮ್ಮ ಸೌರವ್ಯೂಹದಷ್ಟೇ ಹಳೆಯದು ಎಂದು ತಿಳಿಯಿತು.
ಜೊತೆಗೆ ಇದು ಅತ್ಯಂತ ಅಪರೂಪದ ಕಾರ್ಬೊನೇಸಿಯಸ್ ಕಾಂಡ್ರೈಟ್ ಬಗೆಯ ಉಲ್ಕಾಶಿಲೆಯಾಗಿದ್ದು, ಇದರಲ್ಲಿ ಅಮೈನೋ ಆಮ್ಲಗಳಿದ್ದು, ಜೀವದ ಉಗಮಕ್ಕೆ ಸಂಬಂಧಿಸಿದ ರಾಸಾಯನಿಕಗಳಿವೆ. ಹಾಗಾಗಿ, 17 ಕೆ.ಜಿ ತೂಕದ ಈ ಉಲ್ಕಾಶಿಲೆಯು ಈಗ ಮೆಲ್ಬೋರ್ನ್ ವಸ್ತುಸಂಗ್ರಹಾಲಯದ ಅತ್ಯಮೂಲ್ಯ ಆಸ್ತಿಯಾಗಿದೆ.
