Ashwaveega News 24×7 ನವೆಂಬರ್. 29: ಸಿಎಂ-ಡಿಸಿಎಂ ಚರ್ಚೆ ಬಗ್ಗೆ ನನಗೆ ಹೆಚ್ಚಾಗಿ ಗೊತ್ತಿಲ್ಲ ಅಂತ ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ.
ನಾನು ಸೌಜನ್ಯಕ್ಕೆ ಭೇಟಿ ಮಾಡೋಕೆ ಹೋಗಿದ್ದಷ್ಟೇ, ಈ ವೇಳೆ ನನ್ನನ್ನೂ ಕೂಡ ಸಭೆಯಲ್ಲಿ ಕೂರಿಸಿಕೊಂಡ್ರು. ನಂತರ ಅವರಿಬ್ಬರು ಚರ್ಚೆ ಮಾಡಿಕೊಂಡು ಬಂದರು.ಅಷ್ಟು ಬಿಟ್ಟರೆ ನನಗೇನೂ ಹೆಚ್ಚಿನ ಮಾಹಿತಿ ಇಲ್ಲ, ನಿಮ್ಮಗೆ ಎಷ್ಟು ಗೊತ್ತೋ ಅಷ್ಟೇ ನನಗೂ ಗೊತ್ತಿರೋದು.
ಇಲ್ಲಿಂದ ನೇರವಾಗಿ ಯಾರು ಕೂಡ ದೆಹಲಿಗೆ ಹೋಗಲ್ಲ, ಒಂದು ವೇಳೆ ಹೈಕಮಾಂಡ್ ಕರೆದರೆ ಮಾತ್ರ ಹೋಗ್ತಾರೆ ಅಂತ ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದರು.
