Ashwaveega News 24×7 ಡಿಸೆಂಬರ್. 01: ಭಾರತದ ಪ್ರವಾಸೋದ್ಯಮವನ್ನು ಇನ್ನಷ್ಟು ಎತ್ತರಕ್ಕೆ ಕರೆದ್ಯೋಯಲು ಪ್ರಧಾನಿ ಮೋದಿಯವರು ಮುಂದಾಗಿದ್ದಾರೆ. ಈ ಹಿಂದೆ ಭಾರತದಲ್ಲೇ ಮದುವೆ ಪ್ರವಾಸೋದ್ಯಮ ಉತ್ತೇಜಿಸಿ ಎಂದು ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ‘ಈ ಚಳಿಗಾಲದಲ್ಲಿ ಭಾರತದಲ್ಲೇ ಮದುವೆ ಆಗಿ. ವೆಡ್ ಇನ್ ಇಂಡಿಯಾ’ ಎಂದು ಕರೆ ನೀಡಿದ್ದಾರೆ.
ಮಾಸಿಕ ಮನ್ ಕೀ ಬಾತ್ ರೇಡಿಯೋ ಕಾರ್ ಕ್ರಮದಲ್ಲಿ ಮಾತನಾಡಿದ ಅವರು, ‘ಚಳಿಗಾಲದಲ್ಲಿ, ವೆಡ್ ಇನ್ ಇಂಡಿಯಾ’ ಅಭಿಯಾನವು ವಿಭಿನ್ನ ಆಕರ್ಷಣೆಯಾಗಿದೆ. ಚಳಿಗಾಲದ ಹೊಳೆವ ಹೊಂಬಣ್ಣದ ಬಿಸಿಲೇ ಇರಲಿ, ಪರ್ವತಗಳ ಇಳಿಜಾರಿನ ಮೇಲಿನ ಮಂಜಿನ ಹೊದಿಕೆಯೇ ಇರಲಿ, ಡೆಸ್ಟಿನೇಷನ್ಗಳು ವಿವಾಹಕ್ಕೆ ಪರ್ವತಗಳಂತೂ ಜನಪ್ರಿಯವಾಗುತ್ತಿವೆ.
ರಾಜ್ಯಗಳು ಮದುವೆ ಸ್ಥಳಗಳ ಕುರಿತಾಗಿ ವಿಷೇಶ ಪ್ಯಾಕೇಜ್ಗಳನ್ನು ಘೋಷಿಸಬೇಕು.. ಪೋಷಕರು ತಮ್ಮ ಮಕ್ಕಳ ಮದುವೆಯನ್ನು ಬೇರೆ ಬೇರೆ ರಾಜ್ಯಗಳ ಶೈಲಿಯಲ್ಲಿ ಮಾಡಲು ನಿರ್ಧರಿಸುತ್ತಾರೆ, ಅದಕ್ಕೆ ಸೂಕ್ತ ವಾದ ಸ್ಥಳ ನಮ್ಮ ರಾಜ್ಯದಲ್ಲೇ ಲಭ್ಯವಾಗಬೇಕು.
ಜೊತೆಗೆ ಮದುವೆಗಾಗಿ ಸ್ಥಳಗಳನ್ನು ರೂಪಿಸುವುದು ಪ್ರವಾಸೋದ್ಯಮದ ಅವಕಾಶವನ್ನು ಹೆಚ್ಚಿಸಲಿದೆ. ನಮ್ಮ ದೇಶದ ಮಧ್ಯಮ ವರ್ಗದ ಜನರೂ ಸಹ ಇತ್ತೀಚಿಗೆ ವಿದೇಶಗಳಿಗೆ ತೆರಳುತ್ತಿದ್ದಾರೆ. ಇದನ್ನು ಗಮನಿಸಿದರೆ ನಾವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ ಎಂಬುದು ಯೋಚಿಸಬೇಕು.
‘ಚಳಿಗಾಲದ ಈ ದಿನಗಳಲ್ಲಿ ಹಿಮಾಲಯದ ಕಣಿವೆಗಳು ಜೀವಮಾನ ವಿಡೀ ನೆನಪಿನಲ್ಲಿ ಉಳಿಯು ವಂತಹ ಒಂದು ವಿಶೇಷ ಅನುಭವದ ಭಾಗವಾಗುತ್ತವೆ. ಈ ಚಳಿಗಾಲದಲ್ಲಿ ಎಲ್ಲಿಗಾದರೂ ಪ್ರವಾಸ ಹೋಗಬೇಕೆಂದು ನೀವು ಆಲೋಚಿಸುತ್ತಿದ್ದಲ್ಲಿ, ಹಿಮಾಲಯದ ಕಣಿವೆಗಳ ಆಯ್ಕೆಯನ್ನು ಖಂಡಿತವಾಗಿಯೂ ಇರಿಸಿಕೊಳ್ಳಿ’ ಎಂದೂ ಕರೆ ನೀಡಿದರು.
ಜೊತೆಗೆ ಕಾರವಾರದ ವಾರ್ಶಿಪ್ ಮ್ಯೂಸಿಯಂ ಕೂಡಾ ಪ್ರವಾಸಿಗರ ಭೇಟಿಗೆ ಉತ್ತಮ ಸ್ಥಳ ಎಂದು ಸಲಹೆ ನೀಡಿದರು.
”ಚಳಿಗಾಲದ ಪ್ರವಾಸೋದ್ಯಮವನ್ನು ಉತ್ತೇಜಿಸುವುದಕ್ಕಾಗಿ ಸಂಪರ್ಕ ಮತ್ತು ಮೂಲ ಸೌಕರ್ಯಕ್ಕೆ ಕೂಡಾ ಉತ್ತರಾಖಂಡ ಗಮನ ಹರಿಸಿದೆ. ಹೋಂ ಸ್ಟೇಗಳ ಕುರಿತಂತೆ ಹೊಸ ನೀತಿಯನ್ನು ಕೂಡಾ ಜಾರಿ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
