Ashwaveega News 24×7 ಸೆ. 01: ಧರ್ಮಸ್ಥಳ ಪ್ರಕರಣ ಸಿಬಿಐ, NIAಗೆ ಕೊಡಿ ಅಂತಾ ಬಿಜೆಪಿಗರು ಕೇಳ್ತಾರೆ. ಈ ಪ್ರಕರಣವನ್ನ NIAಗೆ ಕೊಟ್ಟರೆ ನೀವೇ ಸಂಪನ್ಮೂಲ ಕೊಡಿ ಅಂತಾ ಹೇಳುತ್ತಾರೆಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸಿಬಿಐ ಮುಂದೆ ರಾಜ್ಯದ 74 ಪ್ರಕರಣಗಳ ತನಿಖೆ ಬಾಕಿ ಇದೆ.
ಮಾನವ ಸಂಪನ್ಮೂಲದ ಕೊರತೆ ಬಗ್ಗೆ CBI ಪತ್ರ ಬರೆದಿತ್ತು. ಧರ್ಮಸ್ಥಳ ಪ್ರಕರಣ ಸಿಬಿಐ, NIAಗೆ ಕೊಡಿ ಅಂತಾ ಕೇಳ್ತಾರೆ. ಕುರ್ಚಿ ಉಳಿಸಿಕೊಳ್ಳಲು ಧರ್ಮಸ್ಥಳ, ಚಾಮುಂಡಿ ಬೆಟ್ಟ ಚಲೋ ಎಲ್ಲವನ್ನೂ ಮಾಡುತ್ತಾರೆ. ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ಸ್ಥಾನ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು..
ಆರ್ಎಸ್ಎಸ್ ಜಗಳವನ್ನು ತಂದು ರಾಜ್ಯ ಸರ್ಕಾರಕ್ಕೆ ಹಚ್ಚುವ ಹುನ್ನಾರ ನಡೆದಿದೆ. ಅದರಿಂದ ಧರ್ಮಸ್ಥಳ ಚಲೋ, ಚಾಮುಂಡೇಶ್ವರಿ ಚಲೋ ನಡೆಸಲಾಗುತ್ತಿದೆ. ನಾಯಕರ ಅಸ್ತಿತ್ವಕ್ಕಾಗಿ ಈ ಯಾತ್ರೆ ನಡೆಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
