Ashwaveega News 24×7 ಅ. 30: ಸ್ನೇಹಿತನಿಂದಲೇ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಗಂಭೀರ ಆರೋಪ ಕೇಳಿ ಬಂದಿದೆ. ಮಾತ್ರವಲ್ಲ, ಅಪ್ಪ-ಮಗ ಇಬ್ಬರೂ ಸೇರಿಕೊಂಡು ಯುವರಿಗೆ ಟಾರ್ಚರ್ ಮಾಡಿದ್ದಾರೆ ಎಂದು ಆರೋಪಿಸಿ ಸುಬ್ರಮಣ್ಯನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
2020 ರಲ್ಲಿ ನಿರಂಜನ್ ಎಂಬು ಯುವಕನಿಗೆ ಸಂತ್ರಸ್ತ ಯುವತಿ ಪರಿಚಯವಾಗಿದ್ದಳು, ಬಳಿಕ ನಿರಂಜನ್ ಆಕೆಯ ಸ್ನೇಹ ಸಂಪಾದಿಸಿ ಯುವತಿಗೆ ಬ್ಲ್ಯಾಕ್ ಮೇಲ್ ಮಾಡೋಕೆ ಮುಂದಾಗಿದ್ದಾನೆ. ತಾನೂ ಹೋದಲೆಲ್ಲಾ ಯುವತಿಯನ್ನ ಕರೆದುಕೊಂಡು ಹೋಗುತ್ತುದ್ದ ಎಂದು ಆರೋಪಿಸಿದ್ದಾರೆ. ಮಾತ್ರವಲ್ಲ, ಯುವತಿಯ ಬೈಕ್ಗೆ ಜಿಪಿಎಸ್ ಅಳವಡಿಸಿ ಫಾಲೋ ಮಾಡುತ್ತಿದ್ದ ಎಂದು ಆರೋಪ ಕೇಳಿ ಬಂದಿದೆ.
ನಿರಂಜನ್ ಹೀಗೆ ಯುವತಿಗೆ ಕಿರುಕುಳ ನೀಡುತ್ತಿರುವ ವಿಚಾರ ಯುವತಿಯ ಕುಟುಂಬಸ್ಥರಿಗೆ ಗೊತ್ತಾಗಿ, ನಿರಂಜನ್ ಮೇಲೆ ದೂರು ನೀಡಿದ್ದಾರೆ. ಆ ಸಂದರ್ಭದಲ್ಲಿ ಮುಂದೆ ಈ ರೀತಿ ಮಾಡಲ್ಲ ಎಂದು ಕ್ಷಮಾಪಣ ಪತ್ರ ಬರೆದುಕೊಟ್ಟಿದ್ದನಂತೆ. ಮತ್ತೇ ಆರೋಪಿ ಯುವತಿಯ ಕಾಲೇಜ್ ಬಳಿ ಹೋಗಿ ಟಾರ್ಚರ್ ಮಾಡಿದ್ದಾನೆ. ಮಾತಾಡೋ ನೆಪದಲ್ಲಿ ಯುವತಿಯನ್ನ ಒಪ್ಪಿಸಿ ಶಾಂಗ್ರೀಲಾ ಹೋಟೆಲ್ ಗೆ ಕರೆದೊಯ್ದಿದ್ದ, ಬಳಿಕ ಲೈಂಗಿಕವಾಗಿ ಬಳಸಿಕೊಂಡು ವೀಡಿಯೋ ಚಿತ್ರೀಕರಿಸಿದ ಆರೋಪ ಕೇಳಿ ಬಂದಿದೆ.
ಇಷ್ಟಾದ ಮೇಲೆ ಆರೋಪಿ ನಿರಂಜನ್ ತಂದೆ ಕೂಡ ಯುವತಿಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪ ಕೇಳಿ ಬಂದಿದೆ. ನಿನ್ನ ಫೋಟೋ, ವೀಡಿಯೋಗಳನ್ನು ನಾನು ನೋಡಿದ್ದೇನೆ, ನನ್ನ ಜೊತೆಗೂ ಮಲಗಬೇಕು ಎಂದು ಕಿರುಕುಳ ನೀಡಿದ್ದಾನಂತೆ, ಈ ವೇಳೆ ಯುವತಿ ನಾನು ನಿಮ್ಮ ಮಗಳ ಸಮಾನ ವೀಡಿಯೋ ಡಿಲೀಟ್ ಮಾಡಿ ಎಂದು ಕೇಳಿಕೊಂಡಿದ್ದಳಂತೆ, ಆದ್ರೂ ತಂದೆ ಕೂಡ ನಿರಂತರವಾಗಿ ಕಿರುಕುಳ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಸದ್ಯ ನಿರಂಜನ್ನನ್ನು ಬಂಧನ ಮಾಡಲಾಗಿದ್ದು, ತಂದೆ ರಾಜಶೇಖರ್ ಪರಾರಿಯಾಗಿದ್ದಾನೆ.
