Ashwaveega News 24×7 ಮಾರ್ಚ್ 01 – 2026 : ಹುಬ್ಬಳ್ಳಿಯ KSCA Stadium ನಲ್ಲಿ ನಡೆದ Ranji Trophy Final ನಲ್ಲಿ ಇತಿಹಾಸ ನಿರ್ಮಾಣವಾಗಿದೆ. ಮೊದಲ ಬಾರಿಗೆ ಫೈನಲ್ಗೇರಿದ್ದ Jammu and Kashmir cricket team ಬಲಿಷ್ಠ Karnataka cricket team ವಿರುದ್ಧ ಏಕಪಕ್ಷೀಯ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ತವರಿನ ಮೈದಾನದಲ್ಲೇ ಕರ್ನಾಟಕಕ್ಕೆ ಮುಖಭಂಗ ಉಂಟಾಗಿದೆ. ಇದು ಕರ್ನಾಟಕದ 15ನೇ ಫೈನಲ್ ಆಗಿದ್ದರೂ, ಮತ್ತೊಮ್ಮೆ ಕೈ ತಪ್ಪಿದ ಕಿರೀಟ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದ ಜಮ್ಮು ಮತ್ತು ಕಾಶ್ಮೀರ ಮೊದಲ ಇನ್ನಿಂಗ್ಸ್ನಲ್ಲಿ ಭರ್ಜರಿ ಪ್ರದರ್ಶನ ನೀಡಿ 584 ರನ್ ಪೇರಿಸಿತು. ಕರ್ನಾಟಕದ ಬೌಲರ್ಗಳಿಗೆ ಆರಂಭದಲ್ಲೇ ಒತ್ತಡ ತಂದ ಜಮ್ಮುಕಾಶ್ಮೀರ ಬ್ಯಾಟರ್ಗಳು ದೊಡ್ಡ ಮೊತ್ತ ಕಟ್ಟಿದರು.
ಪ್ರತ್ಯುತ್ತರವಾಗಿ ಕಣಕ್ಕಿಳಿದ ಕರ್ನಾಟಕ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 293 ರನ್ಗಳಿಗೆ ಆಲೌಟ್ ಆಯಿತು. ದೊಡ್ಡ ಹಿನ್ನಡೆಯಿಂದ ಒತ್ತಡಕ್ಕೆ ಸಿಲುಕಿದ ಕರ್ನಾಟಕ ತಂಡ ಮತ್ತೆ ಪಂದ್ಯಕ್ಕೆ ಮರಳಲು ವಿಫಲವಾಯಿತು.
ಎರಡನೇ ಇನ್ನಿಂಗ್ಸ್ನಲ್ಲಿಯೂ ಜಮ್ಮುಕಾಶ್ಮೀರ ತಂಡ ಶಿಸ್ತುಬದ್ಧ ಬ್ಯಾಟಿಂಗ್ ಮುಂದುವರೆಸಿ ಭಾರೀ ಮುನ್ನಡೆ ಸಾಧಿಸಿತು. ಒಟ್ಟು 630 ರನ್ಗಳ ಮುನ್ನಡೆ ಕಂಡ ಕಾರಣ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೂ, ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರವಾಗಿ ಜಮ್ಮು ಮತ್ತು ಕಾಶ್ಮೀರವನ್ನು ವಿಜೇತರಾಗಿ ಘೋಷಿಸಲಾಯಿತು.
67 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರಿದ ಜಮ್ಮುಕಾಶ್ಮೀರ ತಂಡ ಕ್ರಿಕೆಟ್ ಲೋಕದಲ್ಲಿ ಹೊಸ ಅಧ್ಯಾಯ ಬರೆದಿದೆ. ಚೊಚ್ಚಲ ಕಿರೀಟ ಗೆಲುವಿನ ಸಂಭ್ರಮದಲ್ಲಿ ತಂಡ ಮತ್ತು ಅಭಿಮಾನಿಗಳು ತೇಲುತ್ತಿದ್ದಾರೆ.
ಇತ್ತ, ಬಲಿಷ್ಠ ತಂಡವಾಗಿದ್ದರೂ ಫೈನಲ್ನಲ್ಲಿ ಎಡವಿದ ಕರ್ನಾಟಕ ತಂಡದ ಮೇಲೆ ಆತ್ಮಪರಿಶೀಲನೆ ಮಾಡುವ ಒತ್ತಡ ಹೆಚ್ಚಾಗಿದೆ.
