Ashwaveega News 24×7 ನವೆಂಬರ್. 29: ಕಾವೇರಿ ನಿವಾಸಕ್ಕೆ ಆಗಮಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ನಗು ಮುಖದಲ್ಲೇ ಬರಮಾಡಿಕೊಂಡ್ರು. ಬಳಿಕ ಉಭಯ ನಾಯಕರು ಒಟ್ಟಿಗೆ ಬ್ರೇಕ್ಫಾಸ್ಟ್ ಸವಿದಿದ್ದಾರೆ.
ಕಾಂಗ್ರೆಸ್ನಲ್ಲಿ ಬಿರುಗಾಳಿ ಎಬ್ಬಿಸಿರುವ ಪವರ್ ಶೇರಿಂಗ್ ಕಿತ್ತಾಟ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಹೈಕಮಾಂಡ್ ಮಾತಿನಂತೆ ನಡೆದುಕೊಳ್ಳೋದಾಗಿ ಹೇಳಿದ ಉಭಯ ನಾಯಕರು ಕೂಡ ಇದೀಗ ನೇರ-ನೇರ ಸಭೆ ನಡೆಸಿದ್ದಾರೆ.
ಸಿಎಂ ಕಾವೇರಿ ನಿವಾಸದಲ್ಲಿ ನಡೆಯುತ್ತಿರುವ ಈ ಸಭೆ ಬಹಳ ಮಹತ್ವದ್ದಾಗಿದೆ.
ಉಪಹಾರ ಸೇವಿಸಿದ ಬಳಿಕ ಸಿಎಂ ಹಾಗೂ ಡಿಸಿಎಂ ಪ್ರತ್ಯೇಕ ಕೊಠಡಿಗೆ ತೆರಳಿದ ಚರ್ಚೆ ಆರಂಭಿಸಿದ್ದಾರೆ. ಪವರ್ ಶೇರಿಂಗ್ ವಿಚಾರದ ಬಗ್ಗೆ ಅಂದು ನಡೆದ ಮಾತುಕತೆ ಹಾಗೂ ಇಂದಿನ ಬೆಳವಣಿಗೆಗಳ ಬಗ್ಗೆ ಇಬ್ಬರು ಚರ್ಚೆ ನಡೆಸುವ ಸಾಧ್ಯತೆ ಇದೆ. ಇಂದಿನ ಬ್ರೇಕ್ ಫಾಸ್ಟ್ ಮೀಟಿಂಗ್ ʼಸೀಟ್ ಬ್ರೇಕ್ʼ ಮಾಡುತ್ತಾ ಅಂತ ಕಾದು ನೋಡಬೇಕು.
ಇನ್ನು ಇದೆಲ್ಲ ಬೆಳವಣಿಗೆ ನಡುವೆ , ಡಿಕೆ ಶಿವಕುಮಾರ್ ತಮ್ಮ ದೆಹಲಿ ಪ್ರವಾಸವನ್ನು ಕೊನೇ ಕ್ಷಣದಲ್ಲಿ ರದ್ದುಗೊಳಿಸಿದ್ದಾರೆ. ಇನ್ನು ಸಂಸತ್ತಿನ ಚಳಿಗಾಲದ ಅಧಿವೇಶನ, ಸೋಮವಾರ (ಡಿ.1) ಆರಂಭಗೊಳ್ಳಲಿದೆ, ಅದಕ್ಕೂ ಮುನ್ನ ಕರ್ನಾಟಕದ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಹೈಕಮಾಂಡ್ ಮುಂದಾದಂತಿದೆ.
